ಬೆಲ್ಗ್ರೇಡ್ ನಲ್ಲಿ ಅ.26 ರಿಂದ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್

ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಬರುವ ಅಕ್ಟೋಬರ್ 26 ರಿಂದ ನವೆಂಬರ್ 6ರವರೆಗೆ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಾಸಾನೆ: ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಬರುವ ಅಕ್ಟೋಬರ್ 26 ರಿಂದ ನವೆಂಬರ್ 6ರವರೆಗೆ 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ತಿಳಿಸಿದೆ. 

ಸ್ಪರ್ಧೆಯು ಭಾರತದಲ್ಲಿ ನಿಗದಿಯಾಗಿತ್ತಾದರೂ, ಆತಿಥ್ಯ ಶುಲ್ಕ ಪಾವತಿಸುವಲ್ಲಿ  ವಿಫಲವಾಗಿದ್ದರಿಂದ ಚಾಂಪಿಯನ್ ಶಿಪ್ ಗೆ ಆತಿಥ್ಯ ವಹಿಸುವ ಹಕ್ಕು  ಭಾರತ ಕಳೆದುಕೊಂಡಿದೆ ಎಂದು ಎಐಬಿಎ ಹೇಳಿದೆ. ಸ್ಥಳೀಯ ಸಂಘಟನಾ ಸಮಿತಿ ಮುಖ್ಯಸ್ಥರೂ ಆಗಿರುವ ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಅವರು ಚಾಂಪಿಯನ್ ಶಿಪ್  ನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. 
ಕೋವಿಡ್  ಸವಾಲಿನ ಪರಿಸ್ಥಿತಿ ಹೊರತಾಗಿಯೂ ಸ್ಪರ್ಧೆಯನ್ನು ನಡೆಸಲು ದಿನಾಂಕ ನಿಗದಿ ಪಡಿಸಲಾಗಿದೆ ಎಂದು ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೇವ್ ಹೇಳಿದ್ದಾರೆ.

ಸದ್ಯದ ಸವಾಲಿನ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ನಾವು ಒಗ್ಗಟ್ಟಾಗಿರಬೇಕು. ನಮ್ಮ ಅಥ್ಲೀಟ್  ಗಳು ಉಚ್ಛ ಮಟ್ಟದಲ್ಲಿ ಸಾಧನೆ ತೋರಲು ಅವಕಾಶ ಕಲ್ಪಿಸಬೇಕು. ಎಲ್ಲ ದೇಶಗಳ ಬಾಕ್ಸರ್ ಗಳು ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಉತ್ತಮ ವೇದಿಕೆಯಾಗಿದೆ. ಸ್ಪರ್ಧೆಯನ್ನು ಸುರಕ್ಷಿತ ಕ್ರಮಗಳು ಮತ್ತು ಮಾರ್ಗಸೂಚಿಗಳೊಂದಿಗೆ ನಡೆಸಲಾಗುವುದು ಎಂದು ಕ್ರೆಮ್ಲೇವ್ ಹೇಳಿದ್ದಾರೆ.ಈ ಹಿಂದೆ,2019ರಲ್ಲಿ ರಷ್ಯಾದ ಎಕಾಟೆರಿನ್ ಬರ್ಗ್ ನಲ್ಲಿ
 ಚಾಂಪಿಯನ್ ಶಿಪ್ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com