
ನವದೆಹಲಿ: ಭಾರತದ ಶೂಟಿಂಗ್ ಕೋಚ್ ಮತ್ತು ತಾಂತ್ರಿಕ ಅಧಿಕಾರಿ ಮೊನಾಲಿ ಗೊರ್ಹೆ (44) ಗುರುವಾರ ಬ್ಲಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ನಿಂದ ನಿಧನರಾದರು. ಮೃತರು ಅವರ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.
ಕೋವಿಡ್-19 ಕಾಣಿಸಿಕೊಂಡ ನಂತರ ಮೊನಾಲಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದರು. ಆದರೆ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಆಕೆ ಮತ್ತೆ ಆಸ್ಪತ್ರೆ ಸೇರಿದ್ದರು.
ಇನ್ನು ಮೊನಾಲಿ ಸಾವನ್ನಪ್ಪುವ ಕೆಲ ಗಂಟೆಗಳ ಹಿಂದೆ ಅವರ ತಂದೆ ಮನೋಹರ್ ಗೊರ್ಹೆ ಕೊರೋನಾದಿಂದ ಸಾವನ್ನಪ್ಪಿದ್ದರು.
ಮೊನಾಲಿ ಪಿಸ್ತೂಲ್ ಕೋರ್ ಗುಂಪಿನ ತರಬೇತುದಾರರಾಗಿದ್ದರು. ಅವರು ಶ್ರೀಲಂಕಾದ ಶೂಟಿಂಗ್ ತಂಡದ ರಾಷ್ಟ್ರೀಯ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಮಹಾರಾಷ್ಟ್ರದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದು ನಾಸಿಕ್ನಲ್ಲಿ ಎಕ್ಸೆಲ್ ಶೂಟಿಂಗ್ ಎಂಬ ಶೂಟಿಂಗ್ ಕೋಚಿಂಗ್ ಸೆಂಟರ್ ಅನ್ನು ಸ್ಥಾಪಿಸಿದ್ದರು. ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ) ಮೊನಾಲಿ ಮತ್ತು ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದೆ.
Advertisement