ದೀಪಿಕಾ ಪಡುಕೋಣೆ ಅಷ್ಟು ಚೆನ್ನಾಗಿ ಆಡುತ್ತಾರೆ ಎಂದುಕೊಂಡಿರಲಿಲ್ಲ: ಪಿವಿ ಸಿಂಧು

ಬ್ಯಾಡ್ಮಿಂಟನ್ ಅಲ್ಲದೇ ಇದ್ದಿದ್ದರೆ ಪಿವಿ ಸಿಂಧು ಓರ್ವ ವೈದ್ಯರಾಗಿರುತ್ತಿದ್ದರು. ಹೌದು ನೀವು ಸರಿಯಾಗಿ ಓದಿದ್ದೀರಿ... ಚಿನ್ನದ ಹುಡುಗಿ ಪಿವಿ ಸಿಂಧು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ಪಂದ್ಯ ಹಾಗೂ ಅವರೊಂದಿಗಿನ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 
ಪಿವಿ ಸಿಂಧು
ಪಿವಿ ಸಿಂಧು

ಬ್ಯಾಡ್ಮಿಂಟನ್ ಅಲ್ಲದೇ ಇದ್ದಿದ್ದರೆ ಪಿವಿ ಸಿಂಧು ಓರ್ವ ವೈದ್ಯರಾಗಿರುತ್ತಿದ್ದರು. ಹೌದು ನೀವು ಸರಿಯಾಗಿ ಓದಿದ್ದೀರಿ... ಚಿನ್ನದ ಹುಡುಗಿ ಪಿವಿ ಸಿಂಧು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಜೊತೆಗಿನ ಪಂದ್ಯ ಹಾಗೂ ಅವರೊಂದಿಗಿನ ಒಡನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಬ್ಯಾಡ್ಮಿಂಟನ್ ನಿಮ್ಮ ಕ್ಷೇತ್ರ ಎಂಬುದನ್ನು ಯಾವಾಗ ಅರಿತಿರಿ?

8.5 ವರ್ಷದವಳಾಗಿದ್ದಾಗ ನಾನು ಬ್ಯಾಡ್ಮಿಂಟನ್ ಕ್ರೀಡೆಯನ್ನು ಆಡತೊಡಗಿದೆ. ಆಗ ಅದು ಕೇವಲ ಮನರಂಜನೆಯಷ್ಟೇ ಆಗಿತ್ತು. ನನ್ನ ತಂದೆ ವಾಲಿಬಾಲ್ ನ್ನು ಆಡುತ್ತಿದ್ದರು. ಅವರ ಕೋರ್ಟ್ ಪಕ್ಕದಲ್ಲೇ ಒಂದು ಬ್ಯಾಡ್ಮಿಂಟನ್ ಕೋರ್ಟ್ ಸಹ ಇರುತ್ತಿತ್ತು. ಅಲ್ಲಿ ನಾನು ಪ್ರತಿದಿನವೂ ಆಡುತ್ತಿದೆ. ಹೀಗಾಗಿ ಈ ಕ್ರೀಡೆಯ ಮೇಲೆ ಆಸಕ್ತಿ ಬೆಳೆಯಿತು ಕರಗತವಾಗಿ ಈಗಿನ ಹಂತಕ್ಕೆ ಬಂದಿದ್ದೇನೆ.

ಕ್ರೀಡೆಯಿಂದ ನೀವು ಕಲಿತ ಪಾಠಗಳು ಬಗ್ಗೆ ಹೇಳಬಹುದಾ?

ನಾನು ಬಹಳಷ್ಟು ಕಲಿತಿದ್ದೇನೆ. ಕ್ರೀಡೆಯಿಂದ ನೀವು ಸಾಕಷ್ಟು ಕಲಿಯಲು ಸಾಧ್ಯವಿದೆ ಪ್ರಮುಖವಾಗಿ ನೀವು ತೀರಾ ಕುಗ್ಗಿದ್ದಾಗ ಸಾಕಷ್ಟು ಕಲಿಯಬಹುದು. ಬಲಿಷ್ಠರಾಗಿ ಬೆಳೆಯುವುದು ಮುಖ್ಯವಾಗುತ್ತದೆ ಇದನ್ನು ಕಲಿತಿದ್ದೇನೆ. ಕ್ರೀಡೆ ನನಗೆ ತಾಳ್ಮೆ ಕಲಿಸಿದೆ. ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿತಿದ್ದೇನೆ. ಪಂದ್ಯವನ್ನಾಡುತ್ತಿದ್ದಾಗ ಕೆಲವೊಮ್ಮೆ ನೀವು ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಉದಾಹರಣೆಗೆ ನೀವು ಪಾಯಿಂಟ್ ಗಳನ್ನು ಕಳೆದುಕೊಂಡರೆ, ಮುಂದಿನ ಪಾಯಿಂಟ್ ನ್ನು ಗೆಲ್ಲುವತ್ತ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು ನೀವು ಚಾಂಪಿಯನ್ ಆಗಿದ್ದರೂ ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು, ಸ್ನೇಹಿತರಿಗಾಗಿ ಸಮಯ ಮಾಡಿಕೊಂಡು ಅವರೊಂದಿಗಿನ ಬಾಂಧವ್ಯವನ್ನು ಹೆಚ್ಚು ಮಾಡಿಕೊಳ್ಳಬೇಕು.

ಕ್ರೀಡೆಯಲ್ಲಿ ನೀವು ಸಾಕಷ್ಟು ಮಂದಿಯನ್ನು ಭೇಟಿ ಮಾಡುತ್ತೀರಿ, ವಿವಿಧ ದೇಶಗಳ ಪ್ರತಿಸ್ಪರ್ಧಿಗಳೊಂದಿಗೆ ಪಂದ್ಯಗಳನ್ನು ಎದುರಿಸುತ್ತೀರಿ. ಆದರೆ ಸ್ನೇಹದ ಬಾಂಧವ್ಯ ಬಹಳ ಮುಖ್ಯವಾಗುತ್ತದೆ. ಅಂಗಳದಲ್ಲಿ ನೀವು ಆಕ್ರಮಣಕಾರಿಯಾಗಿ ಕಾಣಬಹುದು, ಆದರೆ ಅಂಗಳದ ಹೊರಗೆ ಸ್ನೇಹ ಮುಖ್ಯವಾಗುತ್ತದೆ.

ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವುದರ ಬಗ್ಗೆ...

ಮಕ್ಕಳು ಪ್ರಾರಂಭಿಕ ಹಂತದಿಂದ ಪ್ರಾರಂಭಿಸಿದರೆ ಒಳ್ಳೆಯದು. ಹಲವರು ಅದನ್ನು ಮಾಡುತ್ತಿದ್ದಾರೆ ಸಹ... ಸರ್ಕಾರ ಈ ನಿಟ್ಟಿನಲ್ಲಿ ಬಹಳ ಬೆಂಬಲ ನೀಡುತ್ತಿದೆ. ಹಾಗೆಯೇ ಪೋಷಕರ ಬೆಂಬಲವೂ ಮುಖ್ಯ. ಮಕ್ಕಳಿಗೆ ಕ್ರೀಡೆ ಬಹಳಮುಖ್ಯವಾದದ್ದು.

ಬ್ಯಾಡ್ಮಿಂಟನ್ ನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದೇ ಇದ್ದಿದ್ದರೆ ಬೇರೆ ಯಾವುದು ನಿಮ್ಮ ಆಯ್ಕೆಯಾಗಿರುತ್ತಿತ್ತು?

ಬಾಲ್ಯದಲ್ಲಿ ನಾನು ವೈದ್ಯೆಯಾಗುವ ಕನಸು ಕಂಡಿದ್ದೆ. ಆದರೆ ಬ್ಯಾಡ್ಮಿಂಟನ್ ಉತ್ತಮವಾಗಿದೆ. ಏಕೆಂದರೆ ನಾನು ಈ ಕ್ರೀಡೆಯನ್ನು ಆಡಲು ಪ್ರಾರಂಭಿಸಿದಾಗಿನಿಂದ ನಾನು ಹಿಂತಿರುಗಿ ನೋಡಿಲ್ಲ ಅಥವಾ ಬೇರೆ ವೃತ್ತಿ ಬೇಕು ಎಂದೆನಿಸಿಲ್ಲ.

ದೀಪಿಕಾ ಪಡುಕೋಣೆ ಜೊತೆ ನೀವು ಸೌಹಾರ್ದಯುತ ಪಂದ್ಯವನ್ನು ಆಡಿರುವ ವಿಡಿಯೋ ಇತ್ತೀಚಿಗೆ ವೈರಲ್ ಆಗಿತ್ತು ಈ ಬಗ್ಗೆ ಹೇಳಿ...

ದೀಪಿಕಾ ಪಡುಕೋಣೆ ನಿಜವಾಗಿಯೂ ಚೆನ್ನಾಗಿ ಆಡುತ್ತಾರೆ. ಆಕೆ ಒಳ್ಳೆಯ ಹಾಗೂ ವಿನೋದದ ವ್ಯಕ್ತಿ. ಆಕೆ ಅಷ್ಟು ಚೆನ್ನಾಗಿ ಆಡುತ್ತಾರೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com