ಭವಾನಿ ದೇವಿ ಕತ್ತಿಗೆ 10 ಕೋಟಿ ರೂ.; ನೀರಜ್ ಜಾವಲಿನ್‌ ಗೆ 1.20 ಕೋಟಿ ರೂ. ತಲುಪಿದ ಬಿಡ್!

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿರುವ ಫೆನ್ಸರ್ ಭವಾನಿ ದೇವಿ ಪಂದ್ಯದಲ್ಲೂ ಸೋತರೂ, ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಇಡೀ ಭಾರತದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನೀರಜ್-ಮೋದಿ
ನೀರಜ್-ಮೋದಿ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತ ಪರ ಫೆನ್ಸಿಂಗ್ ನಲ್ಲಿ ಸ್ಪರ್ಧಿಸಿದ ಮೊದಲ ಮಹಿಳೆ ಎಂಬ ಇತಿಹಾಸ ನಿರ್ಮಿಸಿರುವ ಫೆನ್ಸರ್ ಭವಾನಿ ದೇವಿ ಪಂದ್ಯದಲ್ಲೂ ಸೋತರೂ, ಸ್ಪೂರ್ತಿದಾಯಕ ಪ್ರದರ್ಶನ ನೀಡಿ ಇಡೀ ಭಾರತದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದಕ್ಕಾಗಿಯೇ ಆಕೆ ಒಲಿಂಪಿಕ್ಸ್‌ನಲ್ಲಿ ಬಳಸಿದ್ದ ಕತ್ತಿ(ಫೆನ್ಸ್‌ )ಯೂ ಹೆಚ್ಚು ಭಾರಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. 

ಪ್ರಧಾನಿ ಮಂತ್ರಿಗಳಿಗೆ ಬಂದ ಉಡುಗೊರೆಗಳನ್ನು ಇ-ಹರಾಜಿನ ಭಾಗವಾಗಿ ಭವಾನಿ ದೇವಿ ಅವರ ಕತ್ತಿಯನ್ನು ಹರಾಜು ಹಾಕಿದಾಗ.. ಈವರೆಗೆ ಬಿಡ್ ದರ 10 ಕೋಟಿ ರೂಪಾಯಿಗೆ ತಲುಪಿದೆ. ಇನ್ನೂ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಶಟ್ಲರ್ ಕೃಷ್ಣ ನಾಗರ್‌ ಬಳಸಿದ ರಾಕೆಟ್ ಬೆಲೆ 10 ಕೋಟಿ ತಲುಪಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂದರ್ಭಗಳಲ್ಲಿ, ಪ್ರವಾಸಗಳಲ್ಲಿ ಅವರಿಗೆ ಉಡುಗೊರೆಯಾಗಿ ಬಂದಿರುವ ವಸ್ತುಗಳ ಇ-ಹರಾಜು ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿತು. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳ ಸಲಕರಣೆ, ಉಡುಪುಗಳನ್ನು ಕೂಡ ಹರಾಜಿಗೆ ಇಡಲಾಗಿದೆ. ಭವಾನಿ ದೇವಿಯ ಕತ್ತಿಯನ್ನು 60 ಲಕ್ಷ ರೂ ಮೂಲ ಬೆಲೆಯಲ್ಲಿ ಹರಾಜಿಗೆ ಇಡಲಾಗಿದ್ದು... ಪ್ರಸ್ತುತ 10 ಕೋಟಿಗೆ ಮುಂದುವರಿದಿದೆ. 

ಪ್ಯಾರಾಲಿಂಪಿಯನ್ ಕೃಷ್ಣ ನಾಗರ್‌ ರಾಕೆಟ್‌ ಮೂಲ ಬೆಲೆ ರೂ 80 ಲಕ್ಷ... ಆದರೆ ಈಗ 10 ಕೋಟಿ ತಲುಪಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಇನ್ನೊಬ್ಬ ಶಟ್ಲರ್ ಕನ್ನಡಿಗ ಸುಹಾಸ್ ಯತಿರಾಜ್ ರಾಕೆಟ್ ಅನ್ನು ರೂ. 50 ಲಕ್ಷ ಮೂಲ ಬೆಲೆಯಲ್ಲಿ ಹರಾಜಿಗೆ ಇಟ್ಟಿದ್ದಾರೆ. ಪ್ರಸ್ತುತ ಇದು ರೂ 10 ಕೋಟಿಯಲ್ಲಿದೆ.

ಇನ್ನೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದತಂದ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಬಳಸಿದ ಜಾವೆಲಿನ್‌ 1 ಕೋಟಿ ಮೂಲ ಬೆಲೆಯಲ್ಲಿ ಹರಾಜಿಗೆ ಇಡಲಾಗಿದೆ. ಪ್ರಸ್ತುತ ಅದು 1.20 ಕೋಟಿಯೊಂದಿಗೆ ಮುಂದುವರಿದಿದೆ. ಒಲಿಂಪಿಕ್ಸ್ ನಲ್ಲಿ ಸತತವಾಗಿ ಎರಡು ಪದಕಗಳನ್ನು ಗೆದ್ದ ಏಕೈಕ ಮಹಿಳೆ ಎಂಬ ಇತಿಹಾಸ ನಿರ್ಮಿಸಿರುವ ಪಿ ವಿ ಸಿಂಧು ರಾಕೆಟ್ ಅನ್ನು 80 ಲಕ್ಷ ಮೂಲ ಬೆಲೆಯಲ್ಲಿ ಬಿಡ್ ಮಾಡುತ್ತಿದ್ದು, ಪ್ರಸ್ತುತ ಅದರ ಬೆಲೆ 90 ಲಕ್ಷ ದಾಟಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್ ಸೆನ್ಸೇಷನ್ ಲವ್ಲಿನಾ ಬೊರ್ಗೊಹೆನ್ ಹ್ಯಾಂಡ್ ಗ್ಲೌಸ್ ಗಳ ಹರಾಜು 80 ಲಕ್ಷದಿಂದ ಆರಂಭಗೊಂಡು ಪ್ರಸ್ತುತ ಬೆಲೆ 1.80 ಕೋಟಿ ರೂ ತಲುಪಿದೆ.

ಕೇಂದ್ರ ಸಂಸ್ಕೃತಿ ಸಚಿವಾಲಯ pmmementos.gov.in ನಲ್ಲಿ ಇ- ಹರಾಜಿ ನಡೆಸುತ್ತಿದೆ. ಹರಾಜು ಪ್ರಕ್ರಿಯೆ ಸೆಪ್ಟೆಂಬರ್ 17 ರಿಂದ ಮುಂದಿನ ತಿಂಗಳ 7ರವರೆಗೆ ಮುಂದುವರಿಯಲಿದೆ. ಹರಾಜು ಮುಗಿದ ನಂತರ ಅತಿ ಹೆಚ್ಚು ಬಿಡ್ ಮಾಡಿದವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಹಣವನ್ನು ಗಂಗಾ ಶುದ್ಧೀಕರಣದ ನಮಾಮಿ ಗಂಗಾ ಯೋಜನೆಗೆ ಬಳಸಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com