ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೇಯ್ಟ್ ಲಿಫ್ಟರ್ ಅಚಿಂತ ಶಿವಲಿ

ಕಳೆದ ವಾರದಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟರ್ ಅಚಿಂತ್ಯ ಶಿವಲಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಮೂರು ಚಿನ್ನದ ಪದಕ ಒಲಿದಿದೆ.
ಅಚಿಂತ ಶಿವಲಿ
ಅಚಿಂತ ಶಿವಲಿ

ಬರ್ಮಿಂಗ್ ಹ್ಯಾಮ್: ಕಳೆದ ವಾರದಿಂದ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ವೇಯ್ಟ್ ಲಿಫ್ಟರ್ ಅಚಿಂತ್ಯ ಶಿವಲಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಭಾರತಕ್ಕೆ ಮೂರು ಚಿನ್ನದ ಪದಕ ಒಲಿದಿದೆ.

20 ವರ್ಷದ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಒಟ್ಟು 313 ಕೆಜಿ ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅವರು ಸ್ನ್ಯಾಚ್‌ನಲ್ಲಿ 143 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 170 ಕೆಜಿ ಎತ್ತುವ ಮೂಲಕ ಅಗ್ರಸ್ಥಾನಕ್ಕೇರಿದರು.

ಮಲೇಷ್ಯಾದ ಎರ್ರಿ ಹಿದಾಯತ್ ಮುಹಮ್ಮದ್ ಅವರು ಒಟ್ಟು 303 ಕೆಜಿಯೊಂದಿಗೆ ಬೆಳ್ಳಿ ಪಡೆದರೆ, ಕೆನಡಾದ ಎಸ್. ಡಾರ್ಸಿಗ್ನಿ ಒಟ್ಟು 298 ಕೆಜಿಯೊಂದಿಗೆ ಕಂಚಿನ ಪದಕ ಪಡೆದರು.

ಇವರ ಈ ಸಾಧನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ, ಮನ್ಸುಖ್ ಮಾಂಡವಿಯಾ, ಕೆ ಗೋಪಾಲಯ್ಯ ಶುಭಾಶಯ ಕೋರಿದ್ದಾರೆ.

ಪ್ರತಿಭಾವಂತ ಅಚಿಂತಾ ಶೆಯುಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವುದು ಸಂತಸ ತಂದಿದೆ. ಅವರು ಶಾಂತ ಸ್ವಭಾವ ಮತ್ತು ಸ್ಥಿರತೆಗೆ ಹೆಸರುವಾಸಿಯಾಗಿದ್ದಾರೆ. ಈ ವಿಶೇಷ ಸಾಧನೆಗಾಗಿ ಅವರು ತುಂಬಾ ಶ್ರಮಿಸಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು.

ಕಾಮನ್‌ವೆಲ್ತ್ ಗೇಮ್ಸ್2022ರಲ್ಲಿ ಭಾರತಕ್ಕೆ 3ನೇ ಚಿನ್ನದ ಪದಕ! ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಅಚಿಂತಾ ಶೆಯುಲಿ ಚಿನ್ನದ ಪದಕ ಗೆದ್ದರು! ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ ಅಚಿಂತಾ ಶೆಯುಲಿಗೆ ಅಭಿನಂದನೆಗಳು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಶುಭಾಶಯ ತಿಳಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್2022ರಲ್ಲಿ ಪುರುಷರ 73 ಕೆಜಿ ವೇಟ್ ಲಿಫ್ಟಿಂಗ್ ಈವೆಂಟ್‌ನಲ್ಲಿ ಅಚಿಂತಾ ಶೆಯುಲಿಯ ಅದ್ಭುತ ಲಿಫ್ಟ್ ಭಾರತಕ್ಕೆ ಚಿನ್ನದ ಪದಕವನ್ನು ಪಡೆದುಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com