CWG 2022: ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆ ಎರಡು ಪದಕ; ಒಟ್ಟು ಸಂಖ್ಯೆ 9ಕ್ಕೆ ಏರಿಕೆ!

ಕಾಮನ್ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು ಜುಡೋ ಮತ್ತು ವೇಯ್ಟ್ ಲಿಫ್ಟಿಂಗ್ ನಲ್ಲಿ ತಲಾ ಒಂದು ಪದಕ ಬಂದಿದೆ. ಇದರೊಂದಿಗೆ ಭಾರತದ ಪದಕ ಸಂಖ್ಯೆ 9ಕ್ಕೇರಿದೆ. 
ಹರ್ಜಿಂದರ್ ಕೌರ್-ವಿಜಯ್ ಕುಮಾರ್
ಹರ್ಜಿಂದರ್ ಕೌರ್-ವಿಜಯ್ ಕುಮಾರ್

ಕಾಮನ್ವೆಲ್ತ್ ಗೇಮ್ಸ್ 2022ರ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು ಜುಡೋ ಮತ್ತು ವೇಯ್ಟ್ ಲಿಫ್ಟಿಂಗ್ ನಲ್ಲಿ ತಲಾ ಒಂದು ಪದಕ ಬಂದಿದೆ. ಇದರೊಂದಿಗೆ ಭಾರತದ ಪದಕ ಸಂಖ್ಯೆ 9ಕ್ಕೇರಿದೆ. 

ಜುಡೋದಲ್ಲಿ ವಿಜಯ್ ಕುಮಾರ್ ಕಂಚಿನ ಪದಕ ಗೆದ್ದಿದ್ದರೆ ಭಾರ ಎತ್ತುವ ಸ್ಫರ್ಧೆಯಲ್ಲಿ ಹರ್ಜಿಂದರ್ ಕೌರ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. 

ವಿಜಯ್ ಕುಮಾರ್ ಯಾದವ್ ಅವರು ಕಾಮನ್‌ವೆಲ್ತ್ ಗೇಮ್ಸ್ 2022ರ ನಾಲ್ಕನೇ ದಿನ ಜುಡೋದಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು. ಪುರುಷರ 60 ಕೆಜಿ ಜೂಡೋ ಟೈನಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡ್ಸ್ ಅವರನ್ನು ಸೋಲಿಸಿ ಕಂಚಿನ ಪದಕ ಪಡೆದರು. ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಜೂಡೋ ತಾರೆ ಎಲ್. ಸುಶೀಲಾ ದೇವಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.

ಇನ್ನು ಮಹಿಳೆಯರ 71 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಹರ್ಜಿಂದರ್ ಕೌರ್ ಕಂಚಿನ ಪದಕ ಗೆದ್ದಿದ್ದಾರೆ. ಹರ್ಜಿಂದರ್ ಒಟ್ಟಾರೆ 212 ಕೆಜಿ ತೂಕ ಎತ್ತಿದ್ದರು. ಸ್ನಾಚ್ ನಲ್ಲಿ 93 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್ ನಲ್ಲಿ 119 ಕೆಜಿ ಭಾರ ಎತ್ತಿದ್ದರು. 

ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟಾರೆ 9 ಪದಕಗಳು ಬಂದಿದ್ದು ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಮೂರು ಕಂಚಿನ ಪದಕ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com