ಅನ್ಶು ಮಲಿಕ್
ಅನ್ಶು ಮಲಿಕ್

ಕಾಮನ್ ವೆಲ್ತ್ ಗೇಮ್ಸ್ 2022: ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್

ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಮಹಿಳಾ ಕುಸ್ತಿಪಟು ಅನ್ಶು ಮಲಿಕ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ನೈಜೀರಿಯಾದ ಒಡುನಾಯೊ ಫೋಲ್ಸಾಡೊ ಎದುರು ಪರಾಭವಗೊಂಡ ನಂತರ ಅನ್ಶು ಮಲಿಕ್ ಬೆಳ್ಳಿ ಪದಕ ಪಡೆದರು.
Published on

ಬರ್ಮಿಂಗ್ ಹ್ಯಾಮ್:  ಕಾಮನ್ ವೆಲ್ತ್ ಗೇಮ್ಸ್  2022 ರಲ್ಲಿ ಭಾರತದ ಮಹಿಳಾ ಕುಸ್ತಿಪಟು  ಅನ್ಶು ಮಲಿಕ್  ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 57 ಕೆಜಿ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ನೈಜೀರಿಯಾದ ಒಡುನಾಯೊ ಫೋಲ್ಸಾಡೊ ಎದುರು ಪರಾಭವಗೊಂಡ ನಂತರ ಅನ್ಶು ಮಲಿಕ್ ಬೆಳ್ಳಿ ಪದಕ ಪಡೆದರು. ಈ ಮೂಲಕ ಈ ಗೇಮ್ಸ್ ಗಳಲ್ಲಿ ಚಿನ್ನದ ಪದಕ ಗೆಲ್ಲುವ ಅವರ ಕನಸು ಭಗ್ನಗೊಂಡಿದೆ. 

ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ  ಅನ್ಶು ಮಲಿಕ್, ನೈಜೀರಿಯಾದ ಅಡೆಕುರೊಯೆ ವಿರುದ್ಧ 3-7 ಅಂತರದಲ್ಲಿ ಸೋಲನುಭವಿಸಿದರು. ಪ್ರಸ್ತುತ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022 ರ ಕುಸ್ತಿಯಲ್ಲಿ ಮಲಿಕ್ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು. 

ಅನ್ಶು ಮಲಿಕ್ ಕಠಿಣವಾಗಿ ಹೋರಾಡಿದರು ಆದರೆ ಪಂದ್ಯದ ಆರಂಭದಲ್ಲಿ ತುಂಬಾ ರಕ್ಷಣಾತ್ಮಕವಾಗಿ ಆಡಿದ ಅವರು, ಕೊನೆಯ ನಿಮಿಷದಲ್ಲಿ ಪುಟಿದೇಳಲು ತಮ್ಮ ತಂತ್ರಗಳನ್ನು ಬದಲಾಯಿಸಿದರು, ಇದು ಒಡುನಾಯೊ ಫೋಲಸಾಡೆ ಅಡೆಕುರೊಯೆಗೆ ಪ್ರತಿದಾಳಿ ಮಾಡಲು ಅವಕಾಶ ಮಾಡಿಕೊಟ್ಟಿತು. ನೈಜೀರಿಯಾದ ಎದುರಾಳಿಯು ಪಂದ್ಯದುದ್ದಕ್ಕೂ ಪ್ರಬಲವಾದ ಹೋರಾಟ ನಡೆಸುವ ಮೂಲಕ ಚಿನ್ನದ ಪದಕ ಗೆದ್ದರು. ಅನ್ಶು ಮಲಿಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಅಂಶು ಮಲಿಕ್ ಶ್ರೀಲಂಕಾದ ನೆತ್ಮಿ ಪೊರುತೋಟಗೆ ವಿರುದ್ಧ 10-0 ಅಂತರದಲ್ಲಿ ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಇದಕ್ಕೂ ಮೊದಲು, ಸಾಕ್ಷಿ ಮಲಿಕ್ ಮಹಿಳೆಯರ  62 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಬರ್ತೆ ಎಮಿಲಿಯೆನ್ ಎಟಾನೆ ವಿರುದ್ಧ 10-0 ಅಂತರದಿಂದ ಜಯಗಳಿಸಿ ಫೈನಲ್‌ ಪ್ರವೇಶಿಸಿದರು. ಸಾಕ್ಷಿ ಬೆಳ್ಳಿ ಪದಕ ಖಚಿತಪಡಿಸಿದ್ದು, ಫೈನಲ್‌ನಲ್ಲಿ ಕೆನಡಾದ ಅನಾ ಗೊಡಿನೆಜ್ ಗೊನ್ಜಾಲೆಜ್ ಅವರನ್ನು ಎದುರಿಸಲಿದ್ದಾರೆ. ಜುಲೈ 28 ರಿಂದ ಪ್ರಾರಂಭವಾಗಿರುವ ಕಾಮನ್ ವೆಲ್ತ್ ಗೇಮ್ಸ್ ಆಗಸ್ಟ್ 8 ರವರೆಗೆ ನಡೆಯಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com