ಕಾಮನ್ ವೆಲ್ತ್ ಗೇಮ್ಸ್ 2022: ಭಾರತದ ಕುಸ್ತಿಪಟುಗಳಾದ ನವೀನ್, ವಿನೇಶ್ ಫೋಗಟ್ ಗೆ ಚಿನ್ನ, ಪೂಜಾಗೆ ಕಂಚಿನ ಪದಕ 

ಕಾಮನ್ ವೆಲ್ತ್ ಗೇಮ್ಸ್ 22 ರಲ್ಲಿ ಶನಿವಾರ ಕೂಡಾ ಭಾರತದ ಪದಕ ಭೇಟಿ ಮುಂದುವರೆದಿದೆ. ಅದರಲ್ಲೂ ಕುಸ್ತಿಯಲ್ಲಿ ದೇಶಕ್ಕೆ ಹೆಚ್ಚಿನ ಪದಕಗಳು ಬರುತ್ತಿವೆ.
ನವೀನ್, ವಿನೇಶ್ ಫೋಗಟ್, ಪೂಜಾ
ನವೀನ್, ವಿನೇಶ್ ಫೋಗಟ್, ಪೂಜಾ

ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 22 ರಲ್ಲಿ ಶನಿವಾರ ಕೂಡಾ ಭಾರತದ ಪದಕ ಭೇಟಿ ಮುಂದುವರೆದಿದೆ. ಅದರಲ್ಲೂ ಕುಸ್ತಿಯಲ್ಲಿ ದೇಶಕ್ಕೆ ಹೆಚ್ಚಿನ ಪದಕಗಳು ಬರುತ್ತಿವೆ. ಭಾರತದ ಕುಸ್ತಿಪಟುಗಳಾದ ನವೀನ್, ವಿನೇಶ್ ಫೋಗಟ್ ಚಿನ್ನದ ಪದಕ ಗೆದಿದ್ದಾರೆ. ಇನ್ನೂ ಪೂಜಾ ಗೆಹ್ಲೋಟ್  ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಶನಿವಾರ ನಡೆದ  ಪುರುಷರ 74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ  ಭಾರತದ ಕುಸ್ತಿಪಟು ನವೀನ್  ಪಾಕಿಸ್ತಾನದ ಮೊಹಮ್ಮದ್ ಶರೀಫ್ ತಾಹಿರ್  ಅವರನ್ನು 9-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು. 

ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮತ್ತೆ ಇತಿಹಾಸ ಸೃಷ್ಟಿಸಿದರು. ಮಹಿಳೆಯರ 53 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿಯನ್ನು ಸೋಲಿಸಿ ಚಿನ್ನದ ಪದಕ್ಕೆ ಮುತ್ತಿಟ್ಟರು. ಕಾಮನ್​ವೆಲ್ತ್ ಹಾಗೂ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿರುವ ಇವರು, ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಸತತ ಮೂರನೇ ಸಲ ಸ್ವರ್ಣ ಪದಕ ಗಳಿಸಿರುವ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ.

ಈ ಮಧ್ಯೆ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ 50 ಕೆಜಿ ತೂಕದ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com