'ಮೂಗುತಿ ಸುಂದರಿ' ಸಾನಿಯಾಗೆ ಹುಟ್ಟಹಬ್ಬದ ಸಂಭ್ರಮ: ವಿಚ್ಚೇದನ ವದಂತಿ ನಡುವೆ ಶುಭ ಕೋರಿದ ಶೋಯೆಬ್ ಮಲ್ಲಿಕ್
ನವದೆಹಲಿ: ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಆಕೆಯ ಪತಿ ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್ ತಮ್ಮ 12 ವರ್ಷದ ದಾಂಪತ್ಯ ಜೀವನವನ್ನು ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಈ ವದಂತಿಗಳ ನಡುವೆ ಸಾನಿಯಾ ಮಿರ್ಜಾ ಇಂದು 36 ವರ್ಷದ ಹುಟ್ಟಹಬ್ಬ ಆಚರಿಸುತ್ತಿದ್ದು, ಶೋಯೆಬ್ ಮಲ್ಲಿಕ್ ಕೂಡಾ ಶುಭ ಹಾರೈಸಿದ್ದಾರೆ.
ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ. ಅತ್ಯಂತ ಆರೋಗ್ಯಕರ ಮತ್ತು ಸಂತೋಷದ ಜೀವನ ನಿನ್ನದಾಗಲಿ, ಹುಟ್ಟುಹಬ್ಬದ ದಿನವನ್ನು ಎಂಜಾಯ್ ಮಾಡು ಎಂದು ಶೋಯೆಬ್ ಮಲ್ಲಿಕ್ ಟ್ವೀಟ್ ಮಾಡಿದ್ದಾರೆ.
2010ರಲ್ಲಿ ಮದುವೆಯಾಗಿದ್ದ ಸಾನಿಯಾ ಮತ್ತು ಶೋಯೆಬ್ ಮಲ್ಲಿಕ್ ದಂಪತಿಗೆ ಒಬ್ಬ ಮಗನಿದ್ದಾನೆ. ಇವರ ವಿಚ್ಚೇದನ ಕುರಿತ ವದಂತಿ ಇತ್ತೀಚಿಗೆ ಹಬ್ಬಿತ್ತು. ಈ ಮಧ್ಯೆ ಸಾನಿಯಾ ಮಿರ್ಜಾ ಮಾಡಿದ ಟ್ವೀಟ್ ಕೂಡಾ ಇದನ್ನು ಪುಷ್ಟೀಕರಿಸುವಂತಿತ್ತು. ಆದರೆ, ಈಗ ಶೋಯೆಬ್ ಮಲ್ಲಿಕ್ ಮಾಡಿರುವ ಟ್ವೀಟ್, ವಿಚ್ಚೇದನ ಕುರಿತು ಅನುಮಾನ ಹುಟ್ಟಿಸಿದೆ.
Happy Birthday to you @MirzaSania Wishing you a very healthy & happy life! Enjoy the day to the fullest... pic.twitter.com/ZdCGnDGLOT
— Shoaib Malik
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ