ಕಾಮನ್ ವೆಲ್ತ್ ಗೇಮ್ಸ್ 2022: ಭಾರತದ ಕುಸ್ತಿಪಟುಗಳಾದ ನವೀನ್, ವಿನೇಶ್ ಫೋಗಟ್ ಗೆ ಚಿನ್ನ, ಪೂಜಾಗೆ ಕಂಚಿನ ಪದಕ
ಕಾಮನ್ ವೆಲ್ತ್ ಗೇಮ್ಸ್ 22 ರಲ್ಲಿ ಶನಿವಾರ ಕೂಡಾ ಭಾರತದ ಪದಕ ಭೇಟಿ ಮುಂದುವರೆದಿದೆ. ಅದರಲ್ಲೂ ಕುಸ್ತಿಯಲ್ಲಿ ದೇಶಕ್ಕೆ ಹೆಚ್ಚಿನ ಪದಕಗಳು ಬರುತ್ತಿವೆ.
Published: 06th August 2022 11:48 PM | Last Updated: 06th August 2022 11:48 PM | A+A A-

ನವೀನ್, ವಿನೇಶ್ ಫೋಗಟ್, ಪೂಜಾ
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ 22 ರಲ್ಲಿ ಶನಿವಾರ ಕೂಡಾ ಭಾರತದ ಪದಕ ಭೇಟಿ ಮುಂದುವರೆದಿದೆ. ಅದರಲ್ಲೂ ಕುಸ್ತಿಯಲ್ಲಿ ದೇಶಕ್ಕೆ ಹೆಚ್ಚಿನ ಪದಕಗಳು ಬರುತ್ತಿವೆ. ಭಾರತದ ಕುಸ್ತಿಪಟುಗಳಾದ ನವೀನ್, ವಿನೇಶ್ ಫೋಗಟ್ ಚಿನ್ನದ ಪದಕ ಗೆದಿದ್ದಾರೆ. ಇನ್ನೂ ಪೂಜಾ ಗೆಹ್ಲೋಟ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಶನಿವಾರ ನಡೆದ ಪುರುಷರ 74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿಪಟು ನವೀನ್ ಪಾಕಿಸ್ತಾನದ ಮೊಹಮ್ಮದ್ ಶರೀಫ್ ತಾಹಿರ್ ಅವರನ್ನು 9-0 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡರು.
Indian wrestler Naveen beats Muhammad Sharif Tahir of Pakistan 9-0 in the final of the 74 Kg weight category to win a gold medal#CommonwealthGames pic.twitter.com/utr9lyrcQ5
— ANI (@ANI) August 6, 2022
ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮತ್ತೆ ಇತಿಹಾಸ ಸೃಷ್ಟಿಸಿದರು. ಮಹಿಳೆಯರ 53 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ತಮ್ಮ ಎದುರಾಳಿಯನ್ನು ಸೋಲಿಸಿ ಚಿನ್ನದ ಪದಕ್ಕೆ ಮುತ್ತಿಟ್ಟರು. ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟುವಾಗಿ ಹೊರಹೊಮ್ಮಿರುವ ಇವರು, ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸತತ ಮೂರನೇ ಸಲ ಸ್ವರ್ಣ ಪದಕ ಗಳಿಸಿರುವ ಮೊದಲ ಮಹಿಳಾ ಕುಸ್ತಿಪಟು ಆಗಿದ್ದಾರೆ.
Wrestler Vinesh Phogat wins a Gold medal in Women's Wrestling 53Kgs; becomes the 1st Indian woman to bag 3 consecutive Gold at #CommonwealthGames pic.twitter.com/4UKeFwAqbj
— ANI (@ANI) August 6, 2022
ಈ ಮಧ್ಯೆ ಮಹಿಳಾ ಕುಸ್ತಿಪಟು ಪೂಜಾ ಗೆಹ್ಲೋಟ್ 50 ಕೆಜಿ ತೂಕದ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
Wrestler Pooja Gehlot bags bronze medal in 50 Kg weight category in #CommonwealthGames2022 pic.twitter.com/KsW4QwGLIT
— ANI (@ANI) August 6, 2022