ಸ್ಪೇನ್‌ ಕನಸನ್ನು ಭಗ್ನಗೊಳಿಸಿದ ಮೊರಾಕೊ: ಮೊದಲ ಬಾರಿಗೆ 8ರ ಘಟ್ಟ ತಲುಪಿ ಇತಿಹಾಸ ಸೃಷ್ಟಿ!

ಮೊರಾಕೊ ಫುಟ್‌ಬಾಲ್ ತಂಡ ಇಂದು ನಡೆದ ಫಿಫಾ ವಿಶ್ವಕಪ್-2022ರ 16ರ ಸುತ್ತಿನ ರೋಚಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದೋಹಾ: ಮೊರಾಕೊ ಫುಟ್‌ಬಾಲ್ ತಂಡ ಇಂದು ನಡೆದ ಫಿಫಾ ವಿಶ್ವಕಪ್-2022ರ 16ರ ಸುತ್ತಿನ ರೋಚಕ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದೆ. 

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಒಂದೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇಂಜುರಿ ಟೈಮ್‌ನಲ್ಲಿಯೂ ಉಭಯ ತಂಡಗಳು ಬರಿಗೈಯಲ್ಲಿ ಉಳಿದುಕೊಂಡಿದ್ದರಿಂದ ಹೆಚ್ಚುವರಿ ಸಮಯ ನೀಡಲಾಯಿತು. ಇಲ್ಲಿಯೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಂತರ ಪಂದ್ಯವು ಪೆನಾಲ್ಟಿ ಶೂಟೌಟ್‌ಗೆ ಹೋಗಿತು. 

ಮೊರಾಕೊ ತಂಡದ ಗೋಲ್‌ಕೀಪರ್ ಯಾಸಿನ್ ಬೊನೊ ಇಲ್ಲಿ ಪ್ರಬಲ ಆಟ ಪ್ರದರ್ಶಿಸಿದರು. ತಂಡವನ್ನು ಗೆಲ್ಲಲು ಸ್ಪೇನ್‌ಗೆ ಸತತ ಮೂರು ಪೆನಾಲ್ಟಿ ಸ್ಟಾಪ್‌ಗಳನ್ನು ನೀಡಿದರು. ಈ ಪಂದ್ಯವನ್ನು ಮೊರಾಕೊ 3-0 ಅಂತರದಿಂದ ಗೆದ್ದುಕೊಂಡಿತು.

ಮೊರಾಕೊ ಮೊದಲ ಬಾರಿಗೆ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಮೊರಾಕೊ ಮೊದಲ ಪೆನಾಲ್ಟಿಯಲ್ಲಿ ಅಬ್ಲೆಹಮಿದ್ ಸಬೀರಿ ಗೋಲು ಗಳಿಸಿದರು. ಇದಾದ ಬಳಿಕ ಸ್ಪೇನ್‌ನ ಕಾರ್ಲೋಸ್ ಸೋಲರ್ ಪೆನಾಲ್ಟಿ ತಪ್ಪಿಸಿಕೊಂಡರು. 

ನಂತರ ಹಕಿಮ್ ಝೀಕ್ ಗೋಲು ಗಳಿಸಿ ಮೊರಾಕೊವನ್ನು 2-0 ಮುನ್ನಡೆ ಸಾಧಿಸಿದರು. ಇದಾದ ಬಳಿಕ ಸ್ಪೇನ್ ಮತ್ತೊಮ್ಮೆ ಪೆನಾಲ್ಟಿ ತಪ್ಪಿಸಿತು. ಆಗ ಮೊರೊಕ್ಕೊ ಕೂಡ ಪೆನಾಲ್ಟಿ ತಪ್ಪಿಸಿತು. ಮುಂದಿನ ಪೆನಾಲ್ಟಿಯನ್ನೂ ಸ್ಪೇನ್ ತಪ್ಪಿಸಿತು. ಮೊರೊಕ್ಕೊ ಮುಂದಿನ ಪೆನಾಲ್ಟಿಯನ್ನು ಗೆಲುವಿಗೆ ಪರಿವರ್ತಿಸಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com