ಜೂನಿಯರ್ ವಿಂಬಲ್ಡನ್‌ನಲ್ಲಿ ಭಾಗಿಯಾಗಲು ಇಂಗ್ಲೆಂಡ್‌ಗೆ ತೆರಳಿದ ಕೊಲ್ಹಾಪುರದ ಐಶ್ವರ್ಯಾ

ಕೊಲ್ಲಾಪುರದ ಯುವ ಟೆನಿಸ್ ಆಟಗಾರ್ತಿ ಐಶ್ವರ್ಯಾ ಜಾಧವ್ ಅವರು 14 ವರ್ಷದೊಳಗಿನ ಜೂನಿಯರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಭಾನುವಾರ ಇಂಗ್ಲೆಂಡ್‌ಗೆ ತೆರಳಿದ್ದಾರೆ.
ಐಶ್ವರ್ಯಾ
ಐಶ್ವರ್ಯಾ
Updated on

ಕೊಲ್ಲಾಪುರ: ಕೊಲ್ಲಾಪುರದ ಯುವ ಟೆನಿಸ್ ಆಟಗಾರ್ತಿ ಐಶ್ವರ್ಯಾ ಜಾಧವ್ ಅವರು 14 ವರ್ಷದೊಳಗಿನ ಜೂನಿಯರ್ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಭಾನುವಾರ ಇಂಗ್ಲೆಂಡ್‌ಗೆ ತೆರಳಿದ್ದಾರೆ.

13ರ ಹರೆಯದ ಐಶ್ವರ್ಯಾ ಜುಲೈ 7ರಿಂದ ಆರಂಭವಾಗಲಿರುವ ಜೂನಿಯರ್ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ 14 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮುನ್ನ ಜುಲೈ 4ರಿಂದ ಜುಲೈ 6ರವರೆಗೆ ನಡೆಯುವ ವಿಶೇಷ ತರಬೇತಿ ಶಿಬಿರದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

ಅಖಿಲ ಭಾರತ ಟೆನಿಸ್ ಫೆಡರೇಷನ್ (ಎಐಟಿಎ) ನಂಬರ್ ಒನ್ ಆಟಗಾರ್ತಿ ಐಶ್ವರ್ಯಾ ವಿಂಬಲ್ಡನ್ ನಂತರ ಬೆಲ್ಜಿಯಂ, ಪ್ಯಾರಿಸ್ ಮತ್ತು ಜರ್ಮನಿಯಲ್ಲಿ ನಡೆಯಲಿರುವ ಯುರೋಪ್ ಜೂನಿಯರ್ ಟೆನಿಸ್ ಟೂರ್ನಿಗಳಲ್ಲೂ ಭಾಗವಹಿಸಲಿದ್ದಾರೆ.

2021 ರ ಆರಂಭದಲ್ಲಿ ಅವರು ಭಾರತದಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 94ನೇ ಶ್ರೇಯಾಂಕವನ್ನು ಹೊಂದಿದ್ದರು. ಆದರೆ ವರ್ಷದ ಅಂತ್ಯದ ವೇಳೆಗೆ ಅವರು ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ ಎಂದು ಐಶ್ವರ್ಯಾ ಈ ಹಿಂದೆ ಯುಎನ್ಐ ಏಜೆನ್ಸಿಗೆ ತಿಳಿಸಿದ್ದರು.

ಐಶ್ವರ್ಯಾ ತನ್ನ ಐದನೇ ವಯಸ್ಸಿನಲ್ಲಿ ಟೆನಿಸ್ ನತ್ತ ಮುಖ ಮಾಡಿದರು. ಒಂಬತ್ತನೇ ವಯಸ್ಸಿನಿಂದಲೂ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹಲವು ಸ್ಪರ್ಧೆಗಳಲ್ಲಿ ಐಶ್ವರ್ಯಾ ವಿಜೇತರಾಗಿದ್ದಾರೆ.

2008 ರಲ್ಲಿ ಜನಿಸಿದ ಐಶ್ವರ್ಯಾ ಅವರ ಪೋಷಕರು ಮೂಲತಃ ಕೊಲ್ಲಾಪುರದ ಪನ್ಹಾಲಾ ತಹಸಿಲ್‌ನ ಯುವಲುಜ್ ಗ್ರಾಮದವರು. ಆದರೆ ಐಶ್ವರ್ಯಾಳಿಗೋಸ್ಕರ ಅವರ ಪೋಷಕರು ಕೊಲ್ಹಾಪುರ ನಗರಕ್ಕೆ ತೆರಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com