ವಿಂಬಲ್ಡನ್ 2022: ಅಲೈಜ್ ಕಾರ್ನೆಟ್ ವಿರುದ್ಧ ಇಗಾ ಸ್ವಿಯಾಟೆಕ್ ಗೆ ಸೋಲು! 

ವಿಶ್ವದ ಅಗ್ರಮಾನ್ಯ ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರ 37 ಪಂದ್ಯಗಳ ಜೈತ್ರಯಾತ್ರೆ ಅಲೈಜ್ ಕಾರ್ನೆಟ್ ವಿರುದ್ಧದ ಸೋಲಿನ ಮೂಲಕ ಕೊನೆಗೊಂಡಿದೆ. 
ಇಗಾ ಸ್ವಿಯಾಟೆಕ್
ಇಗಾ ಸ್ವಿಯಾಟೆಕ್

ವಿಂಬಲ್ಡನ್: ವಿಶ್ವದ ಅಗ್ರಮಾನ್ಯ ಟೆನ್ನಿಸ್ ಆಟಗಾರ್ತಿ ಇಗಾ ಸ್ವಿಯಾಟೆಕ್ ಅವರ 37 ಪಂದ್ಯಗಳ ಜೈತ್ರಯಾತ್ರೆ ಅಲೈಜ್ ಕಾರ್ನೆಟ್ ವಿರುದ್ಧದ ಸೋಲಿನ ಮೂಲಕ ಕೊನೆಗೊಂಡಿದೆ. 

ವಿಂಬಲ್ಡನ್ ನ ಮೂರನೇ ಸುತ್ತಿನಲ್ಲಿ ಅಲೈಜ್ ಕಾರ್ನೆಟ್ ಇಗಾ ಸ್ವಿಯಾಟೆಕ್ ಅವರನ್ನು ನೇರ ಸೆಟ್ ಗಳಿಂದ ಮಣಿಸಿದರು. ಫ್ರೆಂಚ್ ಓಪನ್ ನ ಫೈನಲ್ ಗೇರಿದ್ದ ಸ್ವಿಯಾಟೆಕ್, 6-4, 6-2 ರಲ್ಲಿ 37ನೇ ಶ್ರೇಯಾಂಕ ಹೊಂದಿರುವ ಕಾರ್ನೆಟ್ ಎದುರು ಶರಣಾದರು. 

ಫೆಬ್ರವರಿಯಿಂದ ಸೋಲನ್ನೇ ಕಾಣದ ಸ್ವಿಯಾಟೆಕ್ ಸತತ 6 ಟೂರ್ನಮೆಂಟ್ ಗಳನ್ನು ಗೆದ್ದಿದ್ದರು. ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಕಾರ್ನೆಟ್ ಅಚ್ಚರಿಯ ಫಲಿತಾಂಶ ಮೂಡಿಸುತ್ತಿರುವುದು ಇದೇ ಮೊದಲಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com