ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಅಂತಿಮ ಪ್ರಶಸ್ತಿ ಸುತ್ತಿಗೆ ಪಿ ವಿ ಸಿಂಧು ಲಗ್ಗೆ

ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಶಟ್ಲರ್‌ ಪಿವಿ ಸಿಂಧು ಜಪಾನಿನ ಕೆಳ ಶ್ರೇಯಾಂಕದ ಸೈನಾ ಕವಾಕಮಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಪಿ ವಿ ಸಿಂಧು
ಪಿ ವಿ ಸಿಂಧು

ಸಿಂಗಾಪುರ: ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತದ ಶಟ್ಲರ್‌ ಪಿವಿ ಸಿಂಧು ಜಪಾನಿನ ಕೆಳ ಶ್ರೇಯಾಂಕದ ಸೈನಾ ಕವಾಕಮಿ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಈ ವರ್ಷ ಸೈಯದ್ ಮೋದಿ ಇಂಟರ್‌ನ್ಯಾಶನಲ್ ಮತ್ತು ಸ್ವಿಸ್ ಓಪನ್‌ನಲ್ಲಿ ಎರಡು ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಇಂದು ಮುಕ್ತಾಯಗೊಂಡ 32 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ 21-15 21-7 ರಿಂದ ಮೇಲುಗೈ ಸಾಧಿಸಿದರು. 2022 ರ ಈ ವರ್ಷದಲ್ಲಿ ತನ್ನ ಮೊದಲ ಸೂಪರ್ 500 ಪ್ರಶಸ್ತಿಯ ಗೆಲುವಿಗೆ ಒಂದು ಅಂತರದಲ್ಲಿದ್ದಾರೆ. 

2018 ರ ಚೀನಾ ಓಪನ್‌ನಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಿದ ಸಿಂಧು 2-0 ದಾಖಲೆಯೊಂದಿಗೆ ಪಂದ್ಯಕ್ಕೆ ಇಳಿದರು. ಮಾಜಿ ವಿಶ್ವ ಚಾಂಪಿಯನ್ ಸಿಂಧು, ವಿಶ್ವದ 38ನೇ ಶ್ರೇಯಾಂಕದ ಸೈನಾ ಕವಾಕಮಿ ವಿರುದ್ಧ ಸಂಪೂರ್ಣ ಹಿಡಿತ ತೋರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com