ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದಾಖಲೆ: ಐದು ಫುಟ್ಬಾಲ್ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ!
ಪೋರ್ಚುಗಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದಾಖಲೆ ಪುಸ್ತಕಕ್ಕೆ ಮತ್ತೊಂದು ದಾಖಲೆಯನ್ನು ಸೇರಿಸಿದ್ದಾರೆ. 37 ವರ್ಷದ ಸ್ಟಾರ್ ಆಟಗಾರ 2022ರ ಫುಟ್ಬಾಲ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.
Published: 25th November 2022 03:36 PM | Last Updated: 26th November 2022 08:34 PM | A+A A-

ಕ್ರಿಸ್ಟಿಯಾನೊ ರೊನಾಲ್ಡೊ
ಪೋರ್ಚುಗಲ್ ಲೆಜೆಂಡ್ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದಾಖಲೆ ಪುಸ್ತಕಕ್ಕೆ ಮತ್ತೊಂದು ದಾಖಲೆಯನ್ನು ಸೇರಿಸಿದ್ದಾರೆ. 37 ವರ್ಷದ ಸ್ಟಾರ್ ಆಟಗಾರ 2022ರ ಫುಟ್ಬಾಲ್ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು.
65ನೇ ನಿಮಿಷದಲ್ಲಿ ಘಾನಾ ವಿರುದ್ಧ ಗೋಲು ಹೊಡೆಯುವ ಮೂಲಕ ರೊನಾಲ್ಡೊ ವಿಶ್ವದಾಖಲೆ ನಿರ್ಮಿಸಿದರು. ಅವರು ಈಗ ಐದು ವಿಭಿನ್ನ ಫುಟ್ಬಾಲ್ ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ವಿಶ್ವದ ಮೊದಲ ಮತ್ತು ಏಕೈಕ ಆಟಗಾರರಾಗಿದ್ದಾರೆ.
ರೊನಾಲ್ಡೊ ಈ ಹಿಂದೆ 2018, 2014, 2010 ಮತ್ತು 2006ರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ್ದರು. ಇದು ಘಾನಾ ವಿರುದ್ಧ ವಿಶ್ವಕಪ್ ಇತಿಹಾಸದಲ್ಲಿ ಅವರ 8ನೇ ಗೋಲು. ರೊನಾಲ್ಡೊ ಅವರ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನದ ಹೇಳಬೇಕೆಂದರೆ ಇಲ್ಲಿಯವರೆಗೆ 117 ಗೋಲುಗಳನ್ನು ಗಳಿಸಿದ್ದಾರೆ.
ಇದನ್ನೂ ಓದಿ: ಅಭಿಮಾನಿಯೊಂದಿಗೆ ಘರ್ಷಣೆ: ಕ್ರಿಸ್ಟಿಯಾನೋ ರೊನಾಲ್ಡೊಗೆ ದಂಡ; 2 ಪಂದ್ಯಗಳಿಗೆ ನಿಷೇಧ
ಪಂದ್ಯದ ಕುರಿತು ಹೇಳಬೇಕೆಂದರೆ, ದೋಹಾದ ಸ್ಟೇಡಿಯಂ 974ರಲ್ಲಿ ವಿಶ್ವದ 9ನೇ ಶ್ರೇಯಾಂಕಿತ ತಂಡಕ್ಕೆ 65ನೇ ನಿಮಿಷದಲ್ಲಿ ನಾಯಕ ರೊನಾಲ್ಡೊ ಗೋಲಿನ ಮೂಲಕ ಮುನ್ನಡೆ ನೀಡಿದರು. ನಂತರ ಜಾವೊ ಫೆಲಿಕ್ಸ್ (78ನೇ ನಿಮಿಷ) ಮತ್ತು ರಾಫೆಲ್ ಲಿಯಾವೊ (80ನೇ ನಿಮಿಷ) ಪೋರ್ಚುಗಲ್ ಪರ ಗೋಲು ಗಳಿಸಿದರು. ಘಾನಾ ಪರ ನಾಯಕ ಆಂಡ್ರೆ ಅಯೆವ್ (73ನೇ ನಿಮಿಷ) ಮತ್ತು ಉಸ್ಮಾನ್ ಬುಖಾರಿ (89ನೇ ನಿಮಿಷ) ಗೋಲು ಗಳಿಸಿದರು. ಫಿಫಾ ವಿಶ್ವಕಪ್ ಗ್ರೂಪ್ ಎಚ್ ಪಂದ್ಯದಲ್ಲಿ ಘಾನಾ 3-2 ಗೋಲುಗಳಿಂದ ಪೋರ್ಚುಗಲ್ ವಿರುದ್ಧ ಸೋತಿದೆ.