2026 ರ ಕಾಮನ್ ವೆಲ್ತ್ ಗೇಮ್ಸ್ ಪಟ್ಟಿಗೆ ಶೂಟಿಂಗ್ ಇನ್; ಕುಸ್ತಿ, ಬಿಲ್ಲುಗಾರಿಕೆ ಔಟ್

ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026 ರಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)ನ ಪಟ್ಟಿಗೆ ಶೂಟಿಂಗ್ ನ್ನು ಸೇರ್ಪಡೆಗೊಳಿಸಲಾಗಿದ್ದು, ಕುಸ್ತಿಯನ್ನು ಕೈಬಿಡಲಾಗಿದೆ. 
ಶೂಟಿಂಗ್
ಶೂಟಿಂಗ್

ಮೆಲ್ಬೋರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026 ರಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಗೇಮ್ಸ್ (ಸಿಡಬ್ಲ್ಯುಜಿ)ನ ಪಟ್ಟಿಗೆ ಶೂಟಿಂಗ್ ನ್ನು ಸೇರ್ಪಡೆಗೊಳಿಸಲಾಗಿದ್ದು, ಕುಸ್ತಿಯನ್ನು ಕೈಬಿಡಲಾಗಿದೆ. 

ಇದು ಭಾರತಕ್ಕೆ ಸಿಹಿ-ಕಹಿ ಮಿಶ್ರಿತ ಬೆಳವಣಿಗೆಯಾಗಿದೆ. ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ (ಸಿಜಿಎಫ್) ನಲ್ಲಿ 26 ವಿಭಾಗಗಳಲ್ಲಿ 20 ಕ್ರೀಡೆಗಳು ಇರಲಿದ್ದು, ಈ ಪೈಕಿ 9 ಪೂರ್ಣಪ್ರಮಾಣದ ಸಂಯೋಜಿತ ಪ್ಯಾರಾ ಕ್ರೀಡೆಗಳು ಇರಲಿದೆ.

ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಸಿಡಬ್ಲ್ಯುಜಿಯಲ್ಲಿ  ಶೂಟಿಂಗ್ ನ್ನು ಕೈಬಿಡಲಾಗಿತ್ತು. ಈಗ ಮುಂದಿನ ಸಿಡಬ್ಲ್ಯುಜಿಯಲ್ಲಿ ಮರುಸೇರ್ಪಡೆಗೊಳಿಸಿರುವುದು ಭಾರತದ ಮಟ್ಟಿಗೆ ಸ್ವಾಗತಾರ್ಹ ಸಂಗತಿಯಾಗಿದೆ. ಸಿಡಬ್ಲ್ಯುಜಿ ನಲ್ಲಿ ಶೂಟಿಂಗ್ ಭಾರತದ ಪ್ರಬಲ ಕ್ರೀಡೆಯಾಗಿದ್ದು, ಈ ವರೆಗೂ ಭಾರತ 135 ಪದಕ ( 63 ಚಿನ್ನ, 44 ಬೆಳ್ಳಿ, 28 ಕಂಚು) ಪದಕಗಳನ್ನು ಗೆದ್ದಿದೆ. 

ಕುಸ್ತಿಯಲ್ಲಿ ಭಾರತ ಈ ವರೆಗೂ 114 ಪದಕಗಳನ್ನು ಗೆದ್ದಿದೆ. 2018 ರ ಆವೃತ್ತಿಯಲ್ಲಿ ಭಾರತದ ಶೂಟರ್ ಗಳು 16 ಪದಕಗಳನ್ನು ಗೆದ್ದಿದ್ದರು, ದೇಶ ವಿವಿಧ ವಿಭಾಗಗಳಲ್ಲಿ ಭಾರತ ಗೆದ್ದ ಪದಕಗಳ ಪೈಕಿ ಶೇ.25 ರಷ್ಟು ಪದಕಗಳು ಶೂಟಿಂಗ್ ವಿಭಾಗದ್ದಾಗಿತ್ತು. ಈಗ 2026 ರಲ್ಲಿ ಪ್ಯಾರಾ ಶೂಟಿಂಗ್ ನ್ನು ಸೇರಿಸಿರುವುದರಿಂದ ಭಾರತಕ್ಕೆ ಪದಕ ಗೆಲ್ಲುವ ಅವಕಾಶಗಳನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com