ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೊಂದು ಸಾಧನೆ: ಈಗ ಡೈಮಂಡ್ ಲೀಗ್ ಚಾಂಪಿಯನ್

ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಡೈಮಂಡ್ ಲೀಗ್ ಅಂತಿಮ ಪದಕ ಗಳಿಸಿದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ.
ಗೆದ್ದ ಖುಷಿಯಲ್ಲಿ ನೀರಜ್ ಚೋಪ್ರಾ
ಗೆದ್ದ ಖುಷಿಯಲ್ಲಿ ನೀರಜ್ ಚೋಪ್ರಾ

ಝರಿಚ್: ಒಲಿಂಪಿಕ್ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತೊಂದು ಇತಿಹಾಸ ನಿರ್ಮಿಸಿದ್ದಾರೆ. ಪ್ರತಿಷ್ಠಿತ ಡೈಮಂಡ್ ಲೀಗ್ ಅಂತಿಮ ಪದಕ ಗಳಿಸಿದ ಮೊದಲ ಭಾರತೀಯ ಕ್ರೀಡಾಪಟು ಆಗಿದ್ದಾರೆ.

ಆಟದ ಆರಂಭದಲ್ಲಿ ನೀರಜ್ ಚೋಪ್ರಾ ಅವರು ಎಡವಿದರೂ ಕೂಡ ಎರಡನೇ ಪ್ರಯತ್ನದಲ್ಲಿ 88.44 ಮೀಟರ್ ಗೆ ಜಾವೆಲಿನ್ ಎಸೆದು ತಮ್ಮ ಇದುವರೆಗಿನ ವೃತ್ತಿಜೀವನದಲ್ಲಿ ನಾಲ್ಕುನೇ ಅತ್ಯುತ್ತಮ ಪ್ರದರ್ಶನ ತೋರಿಸಿದ್ದಾರೆ.

ಆರಂಭದ ನಂತರ ನಾಲ್ಕು ಎಸೆತಗಳಲ್ಲಿ ನೀರಜ್ ಅವರು 88.00 ಮೀಟರ್, 86.11 ಮೀಟರ್, 87.00 ಮೀಟರ್ ಮತ್ತು 83. 60 ಮೀಟರ್ ಗಳವರೆಗೆ ಜಾವೆಲಿನ್ ಎಸೆದು ದಾಖಲೆ ನಿರ್ಮಿಸಿದರು.

ಜೆಕ್ ಗಣರಾಜ್ಯದ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜಾಕೂಬ್ ವಡ್ಲೆಜ್ 86.94 ಮೀಟರ್ ವರೆಗೆ ಜಾವೆಲಿನ್ ಎಸೆದು ಎರಡನೇ ಸ್ಥಾನ ಗಳಿಸಿದರು. ಇನ್ನು ಜರ್ಮನಿಯ ಜುಲಿಯನ್ ವೆಬರ್ 83.73 ಮೀಟರ್ ವರೆಗೆ ಎಸೆದು ಮೂರನೇ ಸ್ಥಾನ ಗಳಿಸಿದರು. 

24 ವರ್ಷದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಈಗ ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತ ಮತ್ತು ಡೈಮಂಡ್ ಲೀಗ್ ಚಾಂಪಿಯನ್ ಕೂಡ ಆಗಿದ್ದಾರೆ. ಇವೆಲ್ಲವನ್ನೂ ಅವರು ಕೇವಲ 13 ತಿಂಗಳಲ್ಲಿ ಸಾಧಿಸಿದ್ದಾರೆ. ನೀರಜ್ ಚೋಪ್ರಾ ಕಳೆದ ವರ್ಷ ಆಗಸ್ಟ್ 7ರಂದು ಟೋಕ್ಯೋದಲ್ಲಿ ನಡೆದ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com