ಹಾಕಿ ಇಂಡಿಯಾ ನೂತನ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ಅವಿರೋಧ ಆಯ್ಕೆ

ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಒಲಿಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತ ದಿಲೀಪ್ ಟಿರ್ಕಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿಲೀಪ್ ಟಿರ್ಕಿ
ದಿಲೀಪ್ ಟಿರ್ಕಿ

ನವದೆಹಲಿ: ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಒಲಿಂಪಿಯನ್ ಮತ್ತು ಏಷ್ಯನ್ ಗೇಮ್ಸ್ ಪದಕ ವಿಜೇತ ದಿಲೀಪ್ ಟಿರ್ಕಿ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿಲೀಪ್ ಅವರ ವಿರುದ್ಧ ಉತ್ತರ ಪ್ರದೇಶ ಹಾಕಿ ಮುಖ್ಯಸ್ಥ ರಾಕೇಶ್ ಕತ್ಯಾಲ್ ಮತ್ತು ಜಾರ್ಖಂಡ್ ಹಾಕಿ ಮುಖ್ಯಸ್ಥ ಬೋಲಾ ನಾಥ್ ಸಿಂಗ್ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದರು. ಆದರೆ ಇವರಿಬ್ಬರು ತಮ್ಮ ನಾಮಪತ್ರಗಳನ್ನು ಹಿಂಪಡೆದ ನಂತರ ಹೊಸ ಅಧ್ಯಕ್ಷರನ್ನು ಘೋಷಿಸಲಾಯಿತು.

ಹಾಕಿ ಇಂಡಿಯಾ ಚುನಾವಣೆಯನ್ನು ಅಕ್ಟೋಬರ್ 1 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಟಿರ್ಕಿ ಅವರನ್ನು ಇಂದೇ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ದಿಲೀಪ್ ಟಿರ್ಕಿ ಅವರು ದೇಶದ ಅತ್ಯಂತ ಉನ್ನತ ಹುದ್ದೆ ಅಲಂಕರಿಸಿದ ಹಾಕಿ ಆಟಗಾರರಲ್ಲಿ ಒಬ್ಬರು. ಈ ಹಿಂದೆ ಭಾರತ ಪುರುಷರ ಹಾಕಿ ತಂಡವನ್ನು ಮುನ್ನಡೆಸಿದ್ದ ಅವರು 1996, 2000 ಮತ್ತು 2004ರಲ್ಲಿ ಒಲಿಂಪಿಕ್ಸ್ ತಂಡಗಳ ಭಾಗವಾಗಿದ್ದರು. 2003 ಮತ್ತು 2007ರಲ್ಲಿ ಏಷ್ಯಾ ಕಪ್ ವಿಜೇತ ತಂಡಗಳ ಭಾಗವಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com