36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಚಾಲನೆ: ಸ್ವಜನಪಕ್ಷಪಾತ, ಭ್ರಷ್ಟಾಚಾರ ದೇಶದಲ್ಲಿ ಕ್ರೀಡೆಯನ್ನು ಕಾಡುತ್ತಿತ್ತು ಎಂದ ಮೋದಿ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮದ ನಡುವೆ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. 
ರಾಷ್ಟ್ರೀಯ ಕ್ರೀಡಾಕೂಟಕ್ಕೆ ಮೋದಿ ಚಾಲನೆ
ರಾಷ್ಟ್ರೀಯ ಕ್ರೀಡಾಕೂಟಕ್ಕೆ ಮೋದಿ ಚಾಲನೆ

ನವದೆಹಲಿ: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವರ್ಣರಂಜಿತ ಕಾರ್ಯಕ್ರಮದ ನಡುವೆ 36ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. 

ಅಭಿವೃದ್ಧಿ ಹೊಂದಿದ ದೇಶಗಳ ಉದಾಹರಣೆ ನೀಡಿದ ಪ್ರಧಾನಿ ಮೋದಿ, ಜಗತ್ತಿನಲ್ಲಿ ಗೌರವ ಸಿಗುವುದು ಕ್ರೀಡೆಯಲ್ಲಿನ ಯಶಸ್ಸಿಗೆ ನೇರವಾಗಿ ಸಂಬಂಧಿಸಿದೆ. ಅಂತಹ ದೇಶಗಳ ಆಟಗಾರರು ಜಾಗತಿಕ ಕ್ರೀಡೆಗಳಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುತ್ತಾರೆ ಎಂದು ಹೇಳಿದರು.

ಇಂದು ವಿಶ್ವದ ಅಭಿವೃದ್ಧಿ ಮತ್ತು ಆರ್ಥಿಕತೆಯಲ್ಲಿ ಅಗ್ರಸ್ಥಾನದಲ್ಲಿರುವ ದೇಶವು ಬಹುತೇಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕ್ರೀಡೆ ವಿಶ್ವದಲ್ಲಿ 'ಸಾಫ್ಟ್ ಪವರ್' ಕೂಡ ಆಗಿದೆ. ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಆಟಗಾರರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ, ಆದರೆ ಈಗ ಸಾಕಷ್ಟು ಬದಲಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್‌ನಂತಹ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ. ದೇಶದ ಕ್ರೀಡಾಪಟುಗಳು ಈ ಹಿಂದೆಯೂ ಸಮರ್ಥರಾಗಿದ್ದರು. ಪದಕ ಗೆಲ್ಲುವ ಈ ಆಂದೋಲನ ಈ ಹಿಂದೆಯೂ ಆರಂಭವಾಗಬಹುದಿತ್ತು. ಆದರೆ, ಕ್ರೀಡೆಯಲ್ಲಿ ವೃತ್ತಿಪರತೆಯ ಬದಲು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ಇತ್ತು. ವ್ಯವಸ್ಥೆಯನ್ನು ಸ್ವಚ್ಛಗೊಳಿಸಿ ಯುವಕರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದ್ದೇವೆ ಎಂದರು.

ಕ್ರೀಡೆಯಲ್ಲಿ ನಿಮ್ಮ ಗೆಲುವು ಇತರ ಕ್ಷೇತ್ರಗಳಲ್ಲಿ ದೇಶದ ಯಶಸ್ಸಿಗೆ ನಾಂದಿ ಹಾಡುತ್ತದೆ. ಕ್ರೀಡೆಯ ಮೃದು ಶಕ್ತಿಯು ವಿಶ್ವದಲ್ಲಿ ನಮ್ಮ ದೇಶದ ಇಮೇಜ್ ಅನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಮೋದಿ ಕ್ರೀಡಾ ಪಟುಗಳಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com