ಈಜು: ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಧಿನಿಧಿ ದೇಸಿಂಗು!

ಕರ್ನಾಟಕದ ಕ್ರೀಡಾಪಡು ಧಿನಿಧಿ ದೇಸಿಂಗು ಏಷ್ಯನ್ ಗೇಮ್ಸ್‌ನ ಭಾರತದ ಈಜು ತಂಡದ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಏಷ್ಯನ್ ಗೇಮ್ಸ್ ಗೂ ಮೊದಲು, ದೇಸಿಂಗು 39ನೇ ಸಬ್-ಜೂನಿಯರ್ ಮತ್ತು 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ 2023ರಲ್ಲಿ ಮೂರು ಹೊಸ ದಾಖಲೆಗಳೊಂದಿಗೆ ಇತಿಹಾಸವನ್ನು ಬರೆದಿದ್ದಾರೆ.
ಧಿನಿಧಿ ದೇಸಿಂಗು
ಧಿನಿಧಿ ದೇಸಿಂಗು

ಭುವನೇಶ್ವರ: ಕರ್ನಾಟಕದ ಕ್ರೀಡಾಪಡು ಧಿನಿಧಿ ದೇಸಿಂಗು ಏಷ್ಯನ್ ಗೇಮ್ಸ್‌ನ ಭಾರತದ ಈಜು ತಂಡದ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಏಷ್ಯನ್ ಗೇಮ್ಸ್ ಗೂ ಮೊದಲು, ದೇಸಿಂಗು 39ನೇ ಸಬ್-ಜೂನಿಯರ್ ಮತ್ತು 49ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ 2023ರಲ್ಲಿ ಮೂರು ಹೊಸ ದಾಖಲೆಗಳೊಂದಿಗೆ ಇತಿಹಾಸವನ್ನು ಬರೆದಿದ್ದಾರೆ.

'ನಾನು ಸ್ವಲ್ಪ ತಡವಾಗಿ ಈಜಲು ಆರಂಭಿಸಿದ್ದೆ, ಎಂಟನೇ ವಯಸ್ಸಿನಲ್ಲಿ ಈಜು ತರಬೇತಿ ಪಡೆದೆ, ತರಬೇತಿಯ ಐದು ವರ್ಷದೊಳಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಮಹಿಳೆಯರ 200 ಮೀಟರ್ ಫ್ರೀಸ್ಟೈಲ್, 4X100 ಫ್ರೀಸ್ಟೈಲ್ ರಿಲೇ ಮತ್ತು 4X200 ಫ್ರೀಸ್ಟೈಲ್ ರಿಲೇಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಹ್ಯಾಂಗ್‌ಝೌನಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ದೇಸಿಂಗು ಹೇಳಿದ್ದಾರೆ.

ಕೋಚ್ ಮಧು ಕುಮಾರ್ ಬಿಎಂ ಅವರ ನೇತೃತ್ವದಲ್ಲಿ ಡಾಲ್ಫಿನ್ ಅಕ್ವಾಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ 13 ವರ್ಷದ ಬಾಲಕಿ, ಗ್ರೂಪ್ II ಬಾಲಕಿಯರ ಸ್ಪರ್ಧೆಯ 100 ಮೀಟರ್ ಫ್ರೀಸ್ಟೈಲ್‌ನಲ್ಲಿ 57.67 ಸೆಕೆಂಡ್‌ಗಳಲ್ಲಿ ಈಜಿ, 2014ರಲ್ಲಿ ಒಲಿಂಪಿಯನ್ ಮನಾ ಪಟೇಲ್ ಅವರ 59.12 ರ ದಾಖಲೆಯನ್ನು ಮುರಿದರು. ಕೂಟದ ಅಂತಿಮ ದಿನದಂದು, ಏಷ್ಯನ್ ಗೇಮ್ಸ್ ಈಜುಗಾರ್ತಿ 200 ಮೀ ಫ್ರೀಸ್ಟೈಲ್ ಗ್ರೂಪ್ II ನಲ್ಲಿ 2:05.62 ಕ್ಲಾಕ್ ಮಾಡುವ ಮೂಲಕ ಹೊಸ ಕೂಟ ದಾಖಲೆಯನ್ನು ಸ್ಥಾಪಿಸಿದರು.

ಯುವ ಈಜುಗಾರ್ತಿ ತನ್ನ ಪ್ರಯಾಣದಲ್ಲಿ ಸಹಾಯ ಮಾಡಿದ್ದಕ್ಕಾಗಿ ತನ್ನ ಕುಟುಂಬ ಮತ್ತು ತರಬೇತುದಾರನಿಗೆ ಧನ್ಯವಾದಗಳನ್ನು ಅರ್ಪಿಸಿದನು. "ನನ್ನ ಪೋಷಕರು ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ. ನನ್ನ ತರಬೇತುದಾರ ಮಧು ಸರ್, ಫಿಸಿಯೋ ಮತ್ತು ಸಹಾಯಕ ಸಿಬ್ಬಂದಿ ನನ್ನ ಉತ್ತಮ ಭವಿಷ್ಯಕ್ಕಾಗಿ ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ನನ್ನ ತಾಯಿ, ಜೆಸಿತಾ ವಿ ಕೆಲಸದ ಜೊತೆಗೆ ನನ್ನ ಎಲ್ಲಾ ಪ್ರಯತ್ನಗಳಿಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದರು.

ಏಷ್ಯನ್ ಗೇಮ್ಸ್ 2023: ಭಾರತೀಯ ಈಜು ತಂಡ
ಪುರುಷರು: ಅನೀಶ್ ಗೌಡ, ಅದ್ವೈತ್ ಪೇಜ್, ಆರ್ಯನ್ ನೆಹ್ರಾ, ಆನಂದ್ ಎಎಸ್, ಕುಶಾಗ್ರಾ ರಾವತ್, ಲಿಕಿತ್ ಎಸ್ಪಿ, ಸಜನ್ ಪ್ರಕಾಶ್, ಶ್ರೀಹರಿ ನಟರಾಜ್, ತನಿಷ್ ಜಾರ್ಜ್ ಮ್ಯಾಥ್ಯೂ, ಉತ್ಕರ್ಷ್ ಪಾಟೀಲ್, ವಿಶಾಲ್ ಗ್ರೇವಾಲ್ ಮತ್ತು ವಿರ್ಧಾವಲ್ ಖಾಡೆ.

ಮಹಿಳೆಯರು: ಅನನ್ಯಾ ನಾಯಕ್, ದಿನಿಧಿ ದೇಸಿಂಗು, ಹಶಿಕಾ ರಾಮಚಂದ್ರನ್, ಲಿನಿಶಾ ಎಕೆ, ಮನ ಪಟೇಲ್, ನೀನಾ ವೆಂಕಟೇಶ್, ಪಾಲಕ್ ಜೋಶಿ, ಶಿವಂಗಿ ಶರ್ಮಾ ಮತ್ತು ವೃತ್ತಿ ಅಗರ್ವಾಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com