ಚೆಸ್ ವಿಶ್ವಕಪ್: ಪ್ರಜ್ಞಾನಂದಗೆ ವಿರೋಚಿತ ಸೋಲು, ಮ್ಯಾಗ್ನಸ್ ಕಾರ್ಲ್‌ಸನ್ ಚಾಂಪಿಯನ್

ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿರೋಚಿತ ಸೋಲು ಅನುಭವಿಸಿದ್ದು, ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಅವರು ಚಾಂಪಿಯನ್...
ಆರ್ ಪ್ರಗ್ನಾನಂದ-ಮ್ಯಾಗ್ನಸ್ ಕಾರ್ಲ್‌ಸನ್
ಆರ್ ಪ್ರಗ್ನಾನಂದ-ಮ್ಯಾಗ್ನಸ್ ಕಾರ್ಲ್‌ಸನ್

ಬಾಕು: ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ವಿರೋಚಿತ ಸೋಲು ಅನುಭವಿಸಿದ್ದು, ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಭಾರತದ ಯುವ ಆರ್ ಪ್ರಗ್ನಾನಂದ ಅವರು ಮೊದಲ ಮತ್ತು ಎರಡನೇ ಪಂದ್ಯದಲ್ಲೂ ಡ್ರಾ ಸಾಧಿಸಿದ್ದರು. ಹೀಗಾಗಿ ಇಂದು ನಡೆದ ಟೈ ಬ್ರೇಕರ್​ನಲ್ಲಿ ನಾರ್ವೆಯ ಮ್ಯಾಗ್ನಸ್ ಕಾರ್ಲ್​​ಸನ್ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಮ್ಯಾಗ್ನಸ್​ ಕಾರ್ಲ್​ಸನ್​ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಪ್ರಜ್ಞಾನಂದ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಟೈ-ಬ್ರೇಕರ್‌ನಲ್ಲಿ ಜಯ ಸಾಧಿಸಿದ ಕಾರ್ಲ್‌ಸನ್ 1-0 ಮುನ್ನಡೆ ಸಾಧಿಸಿದರು. ನಂತರ ಎರಡನೇ ಪಂದ್ಯವನ್ನು ಡ್ರಾ ಮಾಡಿಕೊಂಡರು. ಈ ಮೂಲಕ ಕಾರ್ಲ್‌ಸನ್ ಚೊಚ್ಚಲ ವಿಶ್ವಕಪ್​ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಚಾಂಪಿಯನ್​ ಪಟ್ಟ ಅಲಂಕರಿಸಿದ ಕಾರ್ಲ್‌ಸನ್‌ ಅವರು ಸುಮಾರು 90, 93,551 ಲಕ್ಷ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ದ್ವಿತೀಯ ಸ್ಥಾನ ಪಡೆದ ಪ್ರಜ್ಞಾನಂದ 66,13,444 ರೂಪಾಯಿ ನಗದು ಬಹುಮಾನವನ್ನು ಪಡೆಯಲಿದ್ದಾರೆ. ಫ್ಯಾಬಿಯಾನೋ ಕರುವಾನಾ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com