ವೇದಾಂತ್
ವೇದಾಂತ್

ಖೇಲೋ ಇಂಡಿಯಾ ಯೂತ್ ಗೇಮ್ಸ್: ಚಿನ್ನ ಗೆದ್ದ ನಟ ಆರ್ ಮಾಧವನ್ ಪುತ್ರ ವೇದಾಂತ್!

ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಈಜು ಸ್ಪರ್ಧೆಯ 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಚಿನ್ನದ ಪದಕ ಗೆದ್ದಿದ್ದಾರೆ.
Published on

ಭೋಪಾಲ್: ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ಈಜು ಸ್ಪರ್ಧೆಯ 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಚಿನ್ನದ ಪದಕ ಗೆದ್ದಿದ್ದಾರೆ. 

ಮಹಾರಾಷ್ಟ್ರ ತಂಡದೊಂದಿಗೆ ಆಡುತ್ತಿರುವ ವೇದಾಂತ್ 1.55.39 ನಿಮಿಷಗಳಲ್ಲಿ ಮೊದಲ ಸ್ಥಾನ ಪಡೆದರು. ದೇವಾಂಶ್ ಪರ್ಮಾರ್ (ಗುಜರಾತ್) 1.55.75 ರಲ್ಲಿ ಎರಡನೇ ಮತ್ತು ಯುಗ್ ಚೆಲ್ಲಾನಿ (ರಾಜಸ್ಥಾನ) 1.55.95 ರಲ್ಲಿ ಮೂರನೇ ಸ್ಥಾನ ಪಡೆದರು.

ಈಜು ಸ್ಪರ್ಧೆಯಲ್ಲಿ ವೇದಾಂತ್ ಮಾಧವನ್ ಐದು ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ 100ಮೀ, 200ಮೀ, 400ಮೀ (ಎಲ್ಲಾ ಫ್ರೀ-ಸ್ಟೈಲ್), 800ಮೀ ಮತ್ತು 1500ಮೀ ಸೇರಿದೆ.

ಪದಕ ಪಟ್ಟಿಯಲ್ಲಿ ಮಹಾರಾಷ್ಟ್ರಕ್ಕೆ ಎರಡನೇ ಸ್ಥಾನ: 
ಆತಿಥೇಯ ಮಧ್ಯಪ್ರದೇಶ 25 ಚಿನ್ನ, 13 ಬೆಳ್ಳಿ ಮತ್ತು 21 ಕಂಚು ಸೇರಿದಂತೆ 59 ಪದಕಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಏರಿದೆ. ಮಹಾರಾಷ್ಟ್ರ 30 ಚಿನ್ನ, 31 ಬೆಳ್ಳಿ, 28 ಕಂಚು ಸೇರಿದಂತೆ 89 ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.

ಮಂಗಳವಾರ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಮಧ್ಯಪ್ರದೇಶಕ್ಕೆ ಎರಡು ಚಿನ್ನ ಲಭಿಸಿದೆ. ಸೆಹೋರ್‌ನ ವಿಶಾಲ್ ವರ್ಮಾ ಕ್ಯಾನೋದಲ್ಲಿ ಚಿನ್ನದ ಪದಕಗಳನ್ನು ಗೆದ್ದರು. ಮಹೇಶ್ವರದ ಸಹಸ್ರಧಾರದಲ್ಲಿ ಕ್ಯಾನೋ ಸ್ಲಾಲೋಮ್‌ನಲ್ಲಿ ಕಯಾಕ್‌ನಲ್ಲಿ ಭೂಮಿ ಬಾಘೆಲ್ ಚಿನ್ನದ ಪದಕಗಳನ್ನು ಗೆದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com