ಮುಂಬಯಿ: ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ಥಾನದ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ವಿಚ್ಛೇದನ ಪಡೆಯುತ್ತಾರೆ ಎಂಬ ವಿಚಾರಗಳು ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದವು.
ವಿಚ್ಛೇದನದ ವದಂತಿ ನಡುವೆಯೇ ಸಾನಿಯಾ ಮಿರ್ಜಾ ಹುಟ್ಟುಹಬ್ಬ ಬಂದಿತ್ತು. ಈ ವೇಳೆ ಶೋಯೆಬ್ ಅವರು ಮುದ್ದಾಗಿ ವಿಶ್ ಮಾಡಿದ್ದರು. ಇದಾದ ಬಳಿಕ ಈ ರೂಮರ್ಸ್‌ಗೆ ಸ್ವಲ್ಪ ಕಾಲ ತೆರೆ ಬಿದ್ದಿತ್ತು. ಈಗ ಮತ್ತೆ ಈ ದಂಪತಿ ಪ್ರತ್ಯೇಕಗೊಳ್ಳುತ್ತಿದ್ದಾರೆ ಎಂಬ ರೂಮರ್ಸ್ ಹೊರಬಿದ್ದಿದೆ.
ಇತ್ತೀಚೆಗೆ ಫೋಟೋವೊಂದನ್ನು ಪೋಸ್ಟ್ ಮಾಡಿದ ಸಾನಿಯಾ ಮಿರ್ಜಾ 2022ರ ವರ್ಷಕ್ಕೆ ಗುಡ್ ಬಾಯ್ ಹೇಳಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದರು. ಈ ಪೋಸ್ಟ್ ಈಗ ವೈರಲ್ ಆಗಿದ್ದು, ಮತ್ತೆ ಡಿವೋರ್ಸ್ ಊಹಾಪೋಹಾ ಕೇಳಿ ಬಂದಿದೆ. 2022ಕ್ಕೆ ನನ್ನ ಬಳಿ ಕ್ಯಾಪ್ಷನ್ ಇಲ್ಲ, ಆದರೆ ನನ್ನ ಬಳಿ ಕೆಲವು ಮುದ್ದಾದ ಸೆಲ್ಫಿಗಳಿವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪಿಎಸ್: 2022 ನೀನು ನಿಜವಾಗಿಯೂ ನನ್ನ ಬುಡಕ್ಕೆ ಒದ್ದಿದ್ದೀಯಾ? ಆದರೆ ನಾನೀಗ ಕೃತಜ್ಞನಾಗಿರಬೇಕು ಎಂದು ಬರೆದು ಎಂಬ ಹ್ಯಾಷ್ ಟ್ಯಾಗ್ ಜೊತೆ ಟ್ಯಾಗ್ ಮಾಡಿದ್ದಾರೆ. ಯೂ ಕಾಂಟ್ ಹ್ಯಾಂಡಲ್ ದ ಟ್ರೂತ್ ಎಂದು ಬರೆದಿರುವುದು ಗೊಂದಲ ಮೂಡಿಸುತ್ತಿದೆ.
ಕಳೆದ ಕೆಲ ತಿಂಗಳಿನಿಂದ ಈ ಜೋಡಿ ವಿಚ್ಛೇದನಕ್ಕೊಳಗಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಸಾನಿಯಾ ಮತ್ತು ಶೋಯೆಬ್ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಅವರ ವಿಚ್ಛೇದನವನ್ನು ಮಾನ್ಯಗೊಳಿಸಲು ಕಾನೂನು ಮಾರ್ಗವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು.
Advertisement