ಮೆಲ್ಬೋರ್ನ್ : ಆಸ್ಟ್ರೇಲಿಯನ್ ಓಪನ್ 2023ರ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಸಾನಿಯಾ ಮತ್ತು ರೋಹನ್ ಬೋಪಣ್ಣ ಜೋಡಿ 6-7, 6-2 ಸೆಟ್‌ಗಳಿಂದ ಸೋತು ನಿರ್ಗಮಿಸಿತು. ಇದರ ಬೆನ್ನಲ್ಲೇ ತಮ್ಮ ಕೊನೆಯ ಗ್ರ್ಯಾಂಡ್ ಸ್ಲಾಂನ ಟೂರ್ನಿಗೆ ಸಾನಿಯಾ ಮಿರ್ಜಾ ಕಣ್ಮೀರಿನ ವಿದಾಯ ಹೇಳಿದರು.
ಆಸ್ಟ್ರೇಲಿಯನ್ ಓಪನ್ 2023ರ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಜೋಡಿ ಬ್ರೆಜಿಲ್ ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ವಿರುದ್ಧ 6-7, 2-6 ಸೆಟ್ ಗಳಿಂದ ಸೋತು ನಿರಾಸೆ ಮೂಡಿಸಿತು.
ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದಲ್ಲಿ ಮೂರು ಮಹಿಳಾ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದರೆ, ಬೋಪಣ್ಣ ಒಂದು ಮಿಶ್ರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್ ನಲ್ಲಿ ಸಾನಿಯಾ-ಬೋಪಣ್ಣ ಜೋಡಿ 7-6(5), 6-7(5), 10-6 ಸೆಟ್ ಗಳಲ್ಲಿ ಮೂರನೇ ಶ್ರೇಯಾಂಕದ ದೇಸಿರೆ ಕ್ರಾವ್ಜಿಕ್ ಮತ್ತು ನೀಲ್ ಸ್ಕುಪ್ಸ್ಕಿ ಅವರನ್ನು ಮಣಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಜೋಡಿಗೆ ವಾಕ್ ಓವರ್ ಸಿಕ್ಕಿತ್ತು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 2ನೇ ಸುತ್ತಿನಲ್ಲಿಯೇ ಸೋಲು ಕಂಡು ನಿರಾಸೆ ಎದುರಿಸಿದ್ದ ಸಾನಿಯಾ ಮಿರ್ಜಾ, ಮಿಶ್ರ ಡಬಲ್ಸ್ ವಿಭಾಗದಲ್ಲಿ ಫೈನಲ್‌ಗೇರುವ ಮೂಲಕ ಪ್ರಶಸ್ತಿಯ ನಿರೀಕ್ಷೆ ಇಟ್ಟಿದ್ದರು. ಆದರೆ, ಫೈನಲ್ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಗೆಲುವಿನ ವಿದಾಯ ಹೇಳುವ ಸಾನಿಯಾ ಮಿರ್ಜಾ ಅವರ ಕನಸು ಭಗ್ನಗೊಂಡಿತು.
ಪಂದ್ಯದ ನಂತರ ಮಾತನಾಡಿದ ಸಾನಿಯಾ ಮಿರ್ಜಾ, ನನ್ನ ವೃತ್ತಿಜೀವನವು ಮೆಲ್ಬೋರ್ನ್ನಲ್ಲಿ 2005 ರಲ್ಲಿ ಪ್ರಾರಂಭವಾಯಿತು, 2005ರಲ್ಲಿ ನಾನು ಇಲ್ಲಿ ಸೆರೇನಾ ವಿಲಿಯಮ್ಸ್‌ರನ್ನು ಮೂರನೇ ಸುತ್ತಿನಲ್ಲಿ ಎದುರಿಸಿದ್ದೆ. ಆಗ ನನಗೆ 18 ವರ್ಷ. 18 ವರ್ಷಗಳ ಹಿಂದಿನ ಆ ದಿನವನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆಂದು ವೇದಿಕೆಯಲ್ಲಿ ʻಆನಂದ ಭಾಷ್ಪʼ ಸುರಿಸಿದರು. 'ನಾನು ಅಳುತ್ತಿದ್ದರೆ, ಇದು ಸಂತೋಷದ ಕಣ್ಣೀರು ಎಂದಿದ್ದಾರೆ.
ಇಲ್ಲಿಗೆ ಬಂದು ಸಾಕಷ್ಟು ಉತ್ತಮ ಟೆನಿಸ್ ಆಟ ಆಡಿ , ಕೆಲವೊಂದು ಪ್ರಶಸ್ತಿ ಗೆದ್ದಿದ್ದಕ್ಕೆ ನನಗೆ ಬಹಳ ಸಂಭ್ರಮವಿದೆ. ರಾಡ್ ಲೆವರ್ ಅರೇನಾ ಎನ್ನುವುದು ನನ್ನ ಜೀವನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುತ್ತದೆ. ನನ್ನ ಗ್ರ್ಯಾಂಡ್ ಸ್ಲಾಂ ವೃತ್ತಿಜೀವನ ಕೊನೆ ಮಾಡಲು ಇದಕ್ಕಿಂತ ಉತ್ತಮ ಕ್ರೀಡಾಂಗಣವಿಲ್ಲ' ಎಂದು ಸಾನಿಯಾ ಮಿರ್ಜಾ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೇಳಿದರು.
Advertisement