ಮಾನನಷ್ಟ ಮೊಕದ್ದಮೆ: ಬಜರಂಗ್ ಪುನಿಯಾಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದ ದೆಹಲಿ ಕೋರ್ಟ್

ಕುಸ್ತಿಪಟು ನರೇಶ್ ದಹಿಯಾ ಅವರು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಗುರುವಾರ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಬಜರಂಗ್​ ಪುನಿಯಾ
ಬಜರಂಗ್​ ಪುನಿಯಾ

ನವದೆಹಲಿ: ಕುಸ್ತಿಪಟು ನರೇಶ್ ದಹಿಯಾ ಅವರು ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಗುರುವಾರ ಕುಸ್ತಿಪಟು ಬಜರಂಗ್ ಪೂನಿಯಾ ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದೆ.

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಯಶ್ದೀಪ್ ಚಾಹಲ್ ಅವರು, ಪುನಿಯಾ ಅವರು ತರಬೇತಿ ಸೆಷನ್‌ಗಳು ಮತ್ತು ಮುಂಬರುವ ಏಷ್ಯನ್ ಗೇಮ್‌ಗಳಿಗಾಗಿ ಕಿರ್ಗಿಸ್ತಾನ್‌ಗೆ ಹೋಗಿದ್ದಾರೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ನಂತರ ಈ ವಿನಾಯಿತಿ ನೀಡಿದರು.

ಈ ಹಿಂದೆ ಕುಸ್ತಿಪಟು ಜ್ವರದಿಂದ ಬಳಲುತ್ತಿದ್ದಾರೆ ಎಂದು ಅವರ ವಕೀಲರು ಹೇಳಿದ ನಂತರ ನ್ಯಾಯಾಧೀಶರು ವೈದ್ಯಕೀಯ ಕಾರಣಗಳಿಗಾಗಿ ಸೆಪ್ಟೆಂಬರ್ 6 ರಂದು ವೈಯಕ್ತಿಕ ಹಾಜರಾತಿಯಿಂದ ಒಂದು ದಿನದ ಮಟ್ಟಿಗೆ ವಿನಾಯಿತಿ ನೀಡಿದ್ದರು.

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ನಿರ್ಗಮಿತ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮೇ 10 ರಂದು ಜಂತರ್ ಮಂತರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪುನಿಯಾ ಮತ್ತು ಇತರ ಕುಸ್ತಿಪಟುಗಳು / ವ್ಯಕ್ತಿಗಳು ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದಹಿಯಾ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com