ಏಷ್ಯನ್ ಗೇಮ್ಸ್: ಮಹಿಳೆಯರ ವೈಯಕ್ತಿಕ 25 ಮೀಟರ್ ಪಿಸ್ತೂಲ್‌ ಸ್ಪರ್ಧೆಯಲ್ಲಿ ಇಶಾ ಸಿಂಗ್ ಗೆ ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಬುಧವಾರವೂ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಭಾರತದ ಶೂಟರ್ ಇಶಾ ಸಿಂಗ್ ಅವರು ಏಷ್ಯನ್ ಗೇಮ್ಸ್‌ನ ಮಹಿಳೆಯರ ವೈಯಕ್ತಿಕ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.
ಇಶಾ ಸಿಂಗ್
ಇಶಾ ಸಿಂಗ್

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಬುಧವಾರವೂ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಭಾರತದ ಶೂಟರ್ ಇಶಾ ಸಿಂಗ್ ಅವರು ಏಷ್ಯನ್ ಗೇಮ್ಸ್‌ನ ಮಹಿಳೆಯರ ವೈಯಕ್ತಿಕ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದರು, ಆದರೆ ಮನು ಭಾಕರ್ ಬುಧವಾರ ಇಲ್ಲಿ ಪೋಡಿಯಂ ಫಿನಿಶ್ ಮಾಡಲು ವಿಫಲರಾದರು.

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್​​ನ (Asian Games 2023) 4ನೇ ದಿನವೂ ಭಾರತ ಪದಕ ಬೇಟೆ ಮುಂದುವರೆಸಿದೆ.  18 ವರ್ಷದ ಇಶಾ 34 ಶಾಟ್ ಹೊಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಚೀನಾದ ರುಯಿ ಲಿಯು 38 ಶೂಟ್ ಗಳ ಆಟದ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಜಿನ್ ಯಾಂಗ್ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಚಿನ್ನದ ಪದಕ ಗೆದ್ದ ರುಯಿ ಲಿಯು ಭಾರತದ ರಾಹಿ ಸರ್ನೋಬತ್ (34) ದಾಖಲೆಯನ್ನು ಮುರಿದಿದ್ದಾರೆ.  ಅರ್ಹತಾ ಸುತ್ತಿನಲ್ಲಿ ಮನು 590 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದಿದ್ದು, ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ ಹ್ಯಾಂಗ್‌ಝೌ ಶೂಟಿಂಗ್ ರೇಂಜ್ ಹಾಲ್‌ನಲ್ಲಿ ನಡೆದ ಎಂಟು ಮಹಿಳಾ ಫೈನಲ್‌ನಲ್ಲಿ ಐದನೇ ಸ್ಥಾನದೊಂದಿಗೆ 21 ರನ್ ಗಳಿಸಿದರು.

ಇದು ಶೂಟಿಂಗ್‌ನಲ್ಲಿ ಭಾರತಕ್ಕೆ 10 ನೇ ಪದಕವಾಗಿದ್ದು,ಇಶಾ ಸಿಂಗ್ ಕೂಡಾ 586 ಅಂಕಗಳೊಂದಿಗೆ 5ನೇ ಸ್ಥಾನವನ್ನು ಗಳಿಸಿದ್ದಾರೆ. ರಿದಮ್ 583 ಅಂಕಗಳನ್ನು ಪಡೆದುಕೊಂಡಿದ್ದಾರೆ. ಇದಕ್ಕೂ ಮುನ್ನ ನಡೆದ ಮಹಿಳಾ 50 ಮೀಟರ್ ರೈಫಲ್ಸ್‌ನಲ್ಲಿ ಆಶಿ ಚೌಕ್ಸೆ, ಮಾನಿನಿ ಕೌಶಿಕ್ ಮತ್ತು ಸಿಫ್ಟ್ ಕೌರ್ ಸಮ್ರಾ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com