ಮೇ 7 ರಂದು ನಿಗದಿಯಾಗಿದ್ದ ಡಬ್ಲ್ಯೂಎಫ್ ಐ ಚುನಾವಣೆಗೆ ತಡೆ, ತಾತ್ಕಾಲಿಕ ಸಮಿತಿ ರಚನೆಗೆ ಐಒಎಗೆ ಕ್ರೀಡಾ ಸಚಿವಾಲಯ ಸೂಚನೆ

ಮೇ 7 ರಂದು ನಿಗದಿಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಗೆ ಕ್ರೀಡಾ ಸಚಿವಾಲಯ ಸೋಮವಾರ ತಡೆ ನೀಡಿದೆ. ಡಬ್ಲ್ಯೂಎಫ್ ಐ ನಿರ್ವಹಿಸಲು ಮತ್ತು ಅದಕ್ಕೆ ರಚನೆಯಾದ 45 ದಿನಗಳಲ್ಲಿ ಚುನಾವಣೆ ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಸೂಚಿಸಿದೆ. 
ಡಬ್ಲ್ಯೂಎಫ್ ಐ ವಿರುದ್ಧದ ಹೋರಾಟದಲ್ಲಿ ಕುಸ್ತಿಪಟುಗಳಾದ ಬಜರಂಗ್ ಫುನಿಯಾ ಮೊದಲಾದವರು
ಡಬ್ಲ್ಯೂಎಫ್ ಐ ವಿರುದ್ಧದ ಹೋರಾಟದಲ್ಲಿ ಕುಸ್ತಿಪಟುಗಳಾದ ಬಜರಂಗ್ ಫುನಿಯಾ ಮೊದಲಾದವರು

ನವದೆಹಲಿ: ಮೇ 7 ರಂದು ನಿಗದಿಯಾಗಿದ್ದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಗೆ ಕ್ರೀಡಾ ಸಚಿವಾಲಯ ಸೋಮವಾರ ತಡೆ ನೀಡಿದೆ. ಡಬ್ಲ್ಯೂಎಫ್ ಐ ನಿರ್ವಹಿಸಲು ಮತ್ತು ಅದಕ್ಕೆ ರಚನೆಯಾದ 45 ದಿನಗಳಲ್ಲಿ ಚುನಾವಣೆ ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಸೂಚಿಸಿದೆ. 

ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ದೇಶದ ಉನ್ನತ ಕುಸ್ತಿಪಟುಗಳು ಪ್ರತಿಭಟನೆಯನ್ನು ಪುನರ್ ಆರಂಭಿಸಿದ್ದು, ಡಬ್ಲ್ಯೂಎಫ್ ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ತನಿಖೆ ನಡೆಸಿದ ಮೇಲ್ವಿಚಾರಣಾ ಸಮಿತಿಯ ಫಲಿತಾಂಶಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದ ನಂತರ ಸಚಿವಾಲಯದಿಂದ ಈ ನಿರ್ಧಾರ ಹೊರಬಿದಿದ್ದೆ. 

ಮೇ 7 ರಂದು ಡಬ್ಲ್ಯೂಎಫ್ ಐಗೆ ಚುನಾವಣೆಯನ್ನು ನಿಗದಿಪಡಿಸಲಾಗಿದೆ ಎಂಬುದು ತಿಳಿದಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಪರಿಗಣಿಸಬೇಕು. ತಟಸ್ಥ ಸಂಸ್ಥೆ, ರಿಟರ್ನಿಂಗ್ ಆಫೀಸರ್ ಅಡಿಯಲ್ಲಿ ಹೊಸ ಚುನಾವಣೆ ನಡೆಸಬೇಕು ಎಂದು ಕ್ರೀಡಾ ಸಚಿವಾಲಯ ಭಾರತೀಯ ಒಲಂಪಿಕ್ ಅಸೋಸಿಷೇನ್ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ. 

ಡಬ್ಲ್ಯೂಎಫ್ ಐ ಕಾರ್ಯಾಕಾರಿ ಸಮಿತಿ ರಚನೆಯಾದ 45 ದಿನಗಳೊಳಗೆ ಚುನಾವಣೆ ನಡೆಸಲು ಭಾರತೀಯ ಒಲಂಪಿಕ್ ಅಸೋಸಿಯೇಷನ್ ನಿಂದ ತಾತ್ಕಾಲಿತ ಸಮಿತಿ ಸ್ಥಾಪಿಸಬೇಕು ಮತ್ತು ಅಥ್ಲೆಟಿಕ್ ಆಯ್ಕೆ ಸೇರಿದಂತೆ ಮುಂದಿನ  ಸಮಿತಿ ರಚನೆಯಾಗುವವರೆಗೂ ಡಬ್ಲ್ಯೂಎಫ್ ಐ ವ್ಯವಹಾರಗಳನ್ನು  ಅದು ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ. 

ಉನ್ನತ ಕುಸ್ತಿಪಟುಗಳಿಂದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಆರೋಪದ ನಂತರ, ಸಚಿವಾಲಯ ಡಬ್ಲ್ಯೂಎಫ್ ಐ ವ್ಯವಹಾರಗಳನ್ನು ನಡೆಸಲು ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲು ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಆರು ಸದಸ್ಯರ ಉಸ್ತುವಾರಿ ಸಮಿತಿಯನ್ನು ರಚಿಸಿದೆ.

ಮೇಲುಸ್ತುವಾರಿ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಅದರ ಅಸ್ತಿತ್ವ ಕೊನೆಯಾಗಲಿದೆ. ಆದ್ದರಿಂದ, ಡಬ್ಲ್ಯೂಎಫ್ ಐ  ವ್ಯವಹಾರಗಳನ್ನು ನಿರ್ವಹಿಸಲು ಸೂಕ್ತವಾದ ಮಧ್ಯಂತರ ವ್ಯವಸ್ಥೆಗ ಮಾಡಲು ಸಚಿವಾಲಯವು ಐಒಎಗೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com