ನಾಳೆ ನಿಗದಿಯಾಗಿದ್ದ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆಗೆ ಪಂಜಾಬ್ ಹೈಕೋರ್ಟ್ ತಡೆ

ಆಗಸ್ಟ್ 12 ರಂದು ನಡೆಯಬೇಕಿದ್ದ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ಚುನಾವಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಂಡೀಗಢ: ಆಗಸ್ಟ್ 12 ರಂದು ನಡೆಯಬೇಕಿದ್ದ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ)ದ ಚುನಾವಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ಹರಿಯಾಣ ಕುಸ್ತಿ ಅಸೋಸಿಯೇಷನ್(HWA) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ಆದೇಶದವರೆಗೆ ಚುನಾವಣೆಗೆ ತಡೆ ನೀಡಿದೆ.

ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಮತ ಚಲಾಯಿಸಲು ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಶನ್‌ಗೆ ಅವಕಾಶ ನೀಡಿದ ಕ್ರಮವನ್ನು ಪ್ರಶ್ನಿಸಿ ಎಚ್‌ಡಬ್ಲ್ಯೂಎ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಸಂಸದ ದೀಪಿಂದರ್ ಹೂಡಾ ನೇತೃತ್ವದ ಹರಿಯಾಣ ವ್ರೆಸ್ಲಿಂಗ್ ಅಸೋಸಿಯೇಶನ್ ಅನ್ನು ಪ್ರತಿನಿಧಿಸುವ ವಕೀಲ ರವೀಂದರ್ ಮಲಿಕ್, HWA ರಾಜ್ಯದಲ್ಲಿ ನೋಂದಾಯಿತ ಸಂಸ್ಥೆಯಾಗಿದೆ ಮತ್ತು WFIನಿಂದ ಮಾನ್ಯತೆ ಪಡೆದಿದೆ ಎಂದು ವಾದಿಸಿದ್ದಾರೆ.

ನಿಯಮಗಳು ಮತ್ತು ಡಬ್ಲ್ಯುಎಫ್‌ಐನ ಸಂವಿಧಾನದ ಪ್ರಕಾರ, ಯಾವುದೇ ನೋಂದಾಯಿತ ಅಂಗಸಂಸ್ಥೆಯು ಡಬ್ಲ್ಯುಎಫ್‌ಐ ಚುನಾವಣೆಗೆ ಮತ ಚಲಾಯಿಸಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು ಎಂದು ಅವರು ಹೇಳಿದ್ದಾರೆ.

ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ HWA ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಏಕೆಂದರೆ ಅದು WFI ನಿಂದ ಮಾನ್ಯತೆ ಪಡೆದಿಲ್ಲ ಎಂದು ಅವರು ವಾದಿಸಿದ್ದಾರೆ.

"ರಿಟರ್ನಿಂಗ್ ಆಫೀಸರ್ ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ ಪರವಾಗಿ ಆದೇಶ ನೀಡಿದ್ದು, ನಾವು ಈ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದೇವೆ ಎಂದು ಮಲಿಕ್ ಹೇಳಿದ್ದಾರೆ.

"ಹರಿಯಾಣ ಅಮೆಚೂರ್ ವ್ರೆಸ್ಲಿಂಗ್ ಅಸೋಸಿಯೇಷನ್ WFI ನಿಂದ ಮಾನ್ಯತೆ ಪಡೆದಿರಬಹುದು. ಆದರೆ ಅದು HOA ನಿಂದ ಮಾನ್ಯತೆ ಪಡೆದಿಲ್ಲ. ಹೀಗಾಗಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಲ್ಲ ಎಂದು ಮಲಿಕ್ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com