ಹಾಕಿ ವಿಶ್ವಕಪ್: ಭಾರತೀಯ ಆಟಗಾರ ಹಾರ್ದಿಕ್ ಸಿಂಗ್ ಗೆ ಎಂಆರ್ ಐ ಸ್ಕ್ಯಾನ್
ಭಾನುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಡ್ಡಿರಚ್ಚು ಗಾಯದಿಂದ ಬಳಲುತ್ತಿರುವ ಭಾರತದ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರಿಗೆ ಇಂದು ಎಂಆರ್ ಐ ಸ್ಕ್ಯಾನ್ ನಡೆಯಲಿದೆ ಎಂದು ವರದಿಯಾಗಿದೆ.
Published: 17th January 2023 12:16 PM | Last Updated: 17th January 2023 05:26 PM | A+A A-

ಹಾರ್ದಿಕ್ ಸಿಂಗ್
ರೂರ್ಕೆಲಾ: ಭಾನುವಾರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಡ್ಡಿರಚ್ಚು ಗಾಯದಿಂದ ಬಳಲುತ್ತಿರುವ ಭಾರತದ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರಿಗೆ ಇಂದು ಎಂಆರ್ ಐ ಸ್ಕ್ಯಾನ್ ನಡೆಯಲಿದೆ ಎಂದು ವರದಿಯಾಗಿದೆ. ಪುರುಷರ ಹಾಕಿ ವಿಶ್ವಕಪ್ 2023ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ತೀವ್ರವಾಗಿ ಗಾಯಗೊಂಡಿದ್ದರು. ಈ ಪಂದ್ಯ 0-0 ಅಂತರದಿಂದ ಡ್ರಾನಲ್ಲಿ ಅಂತ್ಯವಾಯಿತು.
ಎಂಆರ್ ಐ ಸ್ಕ್ಯಾನ್ ಫಲಿತಾಂಶ ಆಧಾರದ ಮೇಲೆ ಟೀಂ ಮ್ಯಾನೇಜ್ ಮೆಂಟ್, ಮಂಡಿರಚ್ಚು ಗಾಯಕ್ಕೆ ಅಗತ್ಯ ಚಿಕಿತ್ಸೆ ನೀಡಲಿದೆ. ವೆಲ್ಸ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಅವರನ್ನು ಸೇರಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಾಕಿ ಇಂಡಿಯಾ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆದ ಸ್ಪೇನ್ ವಿರುದ್ಧದ ಪಂದ್ಯದಲ್ಲಿ 24 ವರ್ಷದ ಮಿಡ್ ಫಿಲ್ಡರ್ ಹಾರ್ದಿಕ್ ತಂದಿಟ್ಟ ಅದ್ಬುತ ಗೋಲಿನಿಂದ ಭಾರತ 2-0 ಅಂತರದಿಂದ ಪಂದ್ಯ ಗೆದ್ದುಕೊಂಡಿತ್ತು.