2023 ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತಕ್ಕೆ ಮೊದಲ ಚಿನ್ನ ಗೆದ್ದ ನೀತು ಘಂಘಾಸ್!
2023 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ನೀತು ಘಂಘಾಸ್ ಚಿನ್ನ ಗೆದಿದ್ದಾರೆ. ಶನಿವಾರ ನಡೆದ ಟೂರ್ನಮೆಂಟ್ ನಲ್ಲಿ 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ ನೀತು ಘಂಘಾಸ್ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು.
Published: 25th March 2023 07:54 PM | Last Updated: 25th March 2023 07:54 PM | A+A A-

ನೀತು ಘಂಘಾಸ್
ನವದೆಹಲಿ: 2023 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ನೀತು ಘಂಘಾಸ್ ಚಿನ್ನ ಗೆದಿದ್ದಾರೆ. ಶನಿವಾರ ನಡೆದ ಟೂರ್ನಮೆಂಟ್ ನಲ್ಲಿ 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ ನೀತು ಘಂಘಾಸ್ ಚಿನ್ನದ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡರು.
ಕಿಕ್ಕಿರಿದು ತುಂಬಿದ ಪ್ರೇಕ್ಷಕರ ನಡುವೆ ಅದ್ಬುತ ಪ್ರದರ್ಶನ ತೋರಿದ ನೀತು, ಆಕ್ರಮಣಕಾರಿ ಮತ್ತು ಪರಿಣಾಮಕಾರಿ ಪಂಚ್ ಮೂಲಕ ಅಲ್ಟಾನ್ಸೆಟ್ಸೆಗ್ ವಿರುದ್ಧ 5-0 ಅಂತರದಿಂದ ಗೆಲುವಿನ ನಗೆ ಬೀರಿದರು. ಈ ಗೆಲುವಿನೊಂದಿಗೆ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿರುವ ನೀತು, ವಿಶ್ವ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡು ಭಾರತದ ಆರನೇ ಬಾಕ್ಸರ್ ಆಗಿದ್ದಾರೆ.
ಈ ಹಿಂದೆ ಮೆರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್ ಎಲ್, ಲೇಖಾ ಕೆಸಿ ಮತ್ತು ನಿಕಾತ್ ಜಾರಿನ್ ಕೂಡಾ ವಿಶ್ವ ಚಾಂಪಿಯನ್ ಶಿಪ್ ಟ್ರೋಫಿ ಗೆದಿದ್ದರು.