ಖೇಲ್ ರತ್ನ ಪ್ರಶಸ್ತಿಯನ್ನು ಫುಟ್‌ಪಾತ್‌ನಲ್ಲಿ ಬಿಟ್ಟು ಹೋಗಿದ್ದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಸಿಕ್ತು ಪ್ಯಾರಿಸ್ ಒಲಿಂಪಿಕ್ಸ್‌ ಟಿಕೆಟ್!

ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಗಳಿಸಿಕೊಂಡಿದ್ದಾರೆ.
ವಿನೇಶ್ ಪೋಗಟ್
ವಿನೇಶ್ ಪೋಗಟ್PTI

ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಗಳಿಸಿಕೊಂಡಿದ್ದಾರೆ.

ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್ ನ ಸೆಮಿಫೈನಲ್ ನಲ್ಲಿ ಕಜಕಿಸ್ತಾನದ ಲಾರಾ ಗಣಿಕ್ಯಾಜಿ ಅವರನ್ನು ಸೋಲಿಸುವ ಮೂಲಕ ವಿನೇಶ್ ಈ ಸಾಧನೆ ಮಾಡಿದ್ದಾರೆ. 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ವಿನೇಶ್ 10-0 ರಿಂದ ಗಾಣಿಕ್ಯಾಜಿ ಅವರನ್ನು ಸೋಲಿಸಿದರು. ಈ ಪಂದ್ಯಾವಳಿಯ ಫೈನಲ್‌ಗೆ ತಲುಪುವ ಕುಸ್ತಿಪಟುಗಳು ತಮ್ಮ ದೇಶಕ್ಕೆ ಪ್ಯಾರಿಸ್ ಒಲಿಂಪಿಕ್ಸ್ 2024 ರ ಕೋಟಾವನ್ನು ಪಡೆಯುತ್ತಾರೆ.

ಈ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ವಿನೇಶ್ ಒಂದು ನಿಮಿಷ 39 ಸೆಕೆಂಡುಗಳ ಕಾಲ ನಡೆದ ಪಂದ್ಯದಲ್ಲಿ ಕೊರಿಯಾದ ಪ್ರತಿಸ್ಪರ್ಧಿ ಮಿರಾನ್ ಚಿಯೋನ್ ಅವರನ್ನು ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಕಾಂಬೋಡಿಯಾದ ಎಸ್ಮಾನಂಗ್ ಡಿಟ್ ಅವರನ್ನು 67 ಸೆಕೆಂಡುಗಳಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಈಗ ಸೆಮಿಫೈನಲ್‌ನಲ್ಲಿ ಗೆದ್ದು ಅಮೋಘ ಸಾಧನೆ ಮಾಡಿದ್ದಾರೆ.

ವಿನೇಶ್ ಪೋಗಟ್
ನನ್ನನ್ನು ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಸಲು ಯತ್ನ ನಡೆದಿದೆ: ವಿನೇಶ್ ಫೋಗಟ್ ಆರೋಪ

ಇತ್ತೀಚೆಗಷ್ಟೇ ಪಟಿಯಾಲದಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 50ರ ಜೊತೆಗೆ ವಿನೇಶ್ 53 ಕೆಜಿ ತೂಕ ವಿಭಾಗದಲ್ಲಿ ಭಾಗವಹಿಸಿದ್ದರು. 53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋತರು. ಆದರೆ 50 ಕೆಜಿ ತೂಕ ವಿಭಾಗದಲ್ಲಿ ಗೆಲುವಿನಿಂದಾಗಿ ವಿನೇಶ್ ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ಗೆ ಪ್ರವೇಶ ಪಡೆದರು. 50 ಕೆಜಿ ವಿಭಾಗದ ಫೈನಲ್‌ನಲ್ಲಿ ಅವರು ಶಿವಾನಿ ಅವರನ್ನು ಸೋಲಿಸಿದರು.

ಮತ್ತೊಂದಡೆ ಪ್ಯಾರಿಸ್ ಒಲಿಂಪಿಕ್ಸ್‌ ಟಿಕೆಟ್ ಪಡೆದ ಅಂಶು ಮಲಿಕ್

ಅಂಶು ಮಲಿಕ್ ಕೂಡ ಮಹಿಳೆಯರ 57 ಕೆಜಿ ತೂಕ ವಿಭಾಗದಲ್ಲಿ ಭಾರತದ ಪರ ಕೋಟಾವನ್ನು ಪಡೆದುಕೊಂಡಿದ್ದಾರೆ. ಏಷ್ಯನ್ ಒಲಿಂಪಿಕ್ ಕ್ವಾಲಿಫೈಯರ್‌ನ ಸೆಮಿಫೈನಲ್‌ನಲ್ಲಿ ಅಂಶು ಉಜ್ಬೇಕಿಸ್ತಾನ್ ಕುಸ್ತಿಪಟುವನ್ನು 10-0 ಅಂತರದಿಂದ ಸೋಲಿಸಿದರು. ಆದಾಗ್ಯೂ, ಮಾನ್ಸಿ 62 ಕೆಜಿ ತೂಕ ವಿಭಾಗದ ಸೆಮಿಫೈನಲ್‌ನಲ್ಲಿ ಸೋಲನ್ನು ಎದುರಿಸಬೇಕಾಯಿತು ಮತ್ತು ಅವರು ಕೋಟಾವನ್ನು ಸಾಧಿಸುವ ಅವಕಾಶವನ್ನು ಕಳೆದುಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com