
ಫ್ರಾನ್ಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಮೊದಲು ಸೋಲು ಅನುಭವಿಸಿದೆ. ಗುರುವಾರ ನಡೆದ ಪೂಲ್- ಬಿ ಗುಂಪಿನ ಹಂತದ ಪಂದ್ಯದಲ್ಲಿ 1-2 ಗೋಲುಗಳ ಅಂತರದಿಂದ ಬೆಲ್ಜಿಯಂ ಎದುರು ಭಾರತ ಸೋಲಿಗೆ ಶರಣಾಯಿತು.
18ನೇ ನಿಮಿಷದಲ್ಲಿ ಭಾರತದ ಪರ ಅಭಿಷೇಕ್ ಗೋಲು ಹೊಡೆದು ಮುನ್ನಡೆಗೆ ತಂದರು. ಆದರೆ, 33ನೇ ನಿಮಿಷದಲ್ಲಿ ಬೆಲ್ಜಿಯಂ ಪರ ತಿಬ್ಯು ಸ್ಟಾಕ್ ಬ್ರೋಕ್ಸ್ ಮತ್ತು 44ನೇ ನಿಮಿಷದಲ್ಲಿ ಜಾನ್-ಜಾನ್ ಡೊಹ್ಮೆನ್ ಗೋಲು ಗಳಿಸುವುದರೊಂದಿಗೆ ಬೆಲ್ಜಿಯಂ ಗೆಲುವು ಸಾಧಿಸಿತು.
ಟೂರ್ನಿಯಲ್ಲಿ ಇಲ್ಲಿಯವರೆಗೂ ಬೆಲ್ಜಿಯಂ ಒಂದು ಪಂದ್ಯವನ್ನೂ ಸೋತಿಲ್ಲ. ಪೂಲ್- ಬಿ ಗುಂಪಿನ ಹಂತದಲ್ಲಿ ಭಾರತ ಮತ್ತು ಬೆಲ್ಜಿಯಂ ಈಗಾಗಲೇ ಕ್ವಾರ್ಟರ್ ಫೈನಲ್ ಗೆ ಅರ್ಹತೆ ಪಡೆದಿವೆ. ಭಾರತ ತನ್ನ ಕೊನೆಯ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 3-2 ಗೋಲುಗಳ ಅಂತರದಿಂದ ಸೋಲಿಸಿತ್ತು.
ಎರಡನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 2-0ರ ಅಂತರದಿಂದ ಜಯಿಸಿತ್ತು. ಅರ್ಜೆಂಟೀನಾ ವಿರುದ್ಧದ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು. ನಾಳೆ ತಮ್ಮ ಅಂತಿಮ ಪೂಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪೈಪೋಟಿ ನಡೆಸಲಿದೆ.
Advertisement