ಪ್ಯಾರಿಸ್: ಒಲಿಂಪಿಕ್ಸ್ 2024 ರಲ್ಲಿ 8 ನೇ ದಿನದಂದು 71 ಕೆ.ಜಿ ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ವಿಭಾಗದಲ್ಲಿ ಭಾರತದ ಬಾಕ್ಸರ್ ನಿಶಾಂತ್ ದೇವ್ ಗೆ ನಿರಾಸೆ ಉಂಟಾಗಿದೆ. ಮೆಕ್ಸಿಕೋದ ಮಾರ್ಕೊ ಅಲೋನ್ಸೊ ವರ್ಡೆ ಅಲ್ವಾರೆಜ್ ವಿರುದ್ಧ ನಿಶಾಂತ್ ದೇವ್ ಪರಾಭವಗೊಂಡಿದ್ದಾರೆ.
ಒಂದು ವೇಳೆ ನಿಶಾಂತ್ ದೇವ್ ಗೆದ್ದಿದ್ದರೆ, ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ನಾಲ್ಕನೆ ಪದಕ ಖಾತ್ರಿಯಾಗಿರುತ್ತಿತ್ತು. ಏತನ್ಮಧ್ಯೆ, ಮಹಿಳೆಯರ 66 ಕೆಜಿ ಬಾಕ್ಸಿಂಗ್ ಕ್ವಾರ್ಟರ್-ಫೈನಲ್‌ನಲ್ಲಿ ಅನ್ನಾ ಲುಕಾ ಹಮೊರಿ (ಹಂಗೇರಿ) ಅವರನ್ನು ಸೋಲಿಸಿದ ನಂತರ ಲಿಂಗಕ್ಕೆ ಸಂಬಂಧಿಸಿದ ವಿವಾದಕ್ಕೆ ಗುರಿಯಾಗಿರುವ ಅಲ್ಜೀರಿಯಾದ ಬಾಕ್ಸರ್ ಇಮಾನೆ ಖೆಲಿಫ್ ಪದಕದ ಭರವಸೆ ಹೊಂದಿದ್ದಾರೆ.
ಇದಕ್ಕೂ ಮುನ್ನ ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ನಾಮ್ ಸುಹ್ಯೆನ್ ವಿರುದ್ಧ ಸೋಲು ಕಂಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳೆಯರ 25 ಮೀ ಪಿಸ್ತೂಲ್ ಫೈನಲ್‌ನಲ್ಲಿ 4 ನೇ ಸ್ಥಾನ ಗಳಿಸಿ ಭಾರತದ ಶೂಟರ್ ಮನು ಭಾಕರ್ ಅವರು ಪದಕದಿಂದ ವಂಚಿತರಾದರು. ಸೇಂಟ್ ಲೂಸಿಯಾದ ಜೂಲಿಯನ್ ಆಲ್ಫ್ರೆಡ್ ಅವರು ಒಲಿಂಪಿಕ್ ಮಹಿಳೆಯರ 100 ಮೀ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಶಾ'ಕ್ಯಾರಿ ರಿಚರ್ಡ್ಸನ್ ಅವರನ್ನು ದಂಗುಬಡಿಸಿದರು.
Advertisement