
ಪ್ಯಾರಿಸ್: ತೂಕ ಹೆಚ್ಚಾದ ಕಾರಣ ಒಲಿಂಪಿಕ್ಸ್ 2024 ರ ಕುಸ್ತಿ ಫೈನಲ್ ನಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ ಕೋಚ್ ಗಳೊಂದಿಒಲ್ಗಿ ಮಾತನಾಡಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಆದರೆ ಕೊನೆಯ ಹಂತದ ಪರೀಕ್ಷೆಯಲ್ಲಿ ತೂಕ ಹೆಚ್ಚಾದ ಕಾರಣ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ತೀವ್ರ ವ್ಯಾಯಾಮದ ಮೊರೆ ಹೋಗಿದ್ದ ಫೋಗಟ್ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವೇಳೆ ಕೋಚ್ ಗಳೊಂದಿಗೆ ಮಾತನಾಡಿರುವ ವಿನೇಶ್ ಫೋಗಟ್, ಕ್ರೀಡಾಸ್ಪೂರ್ತಿಯ ಮಾತುಗಳನ್ನಾಡಿದ್ದು ಇದೆಲ್ಲಾ ಕ್ರೀಡೆಯ ಭಾಗ ಎಂದು ಹೇಳಿದ್ದಾರೆ. ಮಹಿಳಾ ರಾಷ್ಟ್ರೀಯ ಕೋಚ್ ವೀರೇಂದ್ರ ದಹಿಯಾ ಮತ್ತು ಮಂಜೀತ್ ರಾಣಿ ಮಂಗಳವಾರ ಆರಂಭಿಕ ಸುತ್ತಿನಲ್ಲಿ ವಿಶ್ವದ ನಂಬರ್ ಒನ್ ಮತ್ತು ಹಾಲಿ ಚಾಂಪಿಯನ್ ಯುಯಿ ಸುಸಾಕಿಯನ್ನು ಸೋಲಿಸುವ ಮೂಲಕ ಕುಸ್ತಿ ಅಖಾಡದಲ್ಲಿ ಸಂಚಲನ ಮೂಡಿಸಿದ್ದ ಕುಸ್ತಿಪಟುವನ್ನು ಭೇಟಿಯಾಗಿದ್ದರು.
"ಈ ಬೆಳವಣಿಗೆ ಕುಸ್ತಿ ತಂಡಕ್ಕೆ ಆಘಾತ ಉಂಟುಮಾಡಿದೆ. ಸುದ್ದಿ ಹೊರಬಿದ್ದ ನಂತರ ನಾವು ವಿನೇಶ್ ಅವರನ್ನು ಭೇಟಿ ಮಾಡಿ ಆಕೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು. ಅವಳು ಧೈರ್ಯಶಾಲಿ. 'ನಾವು ಪದಕವನ್ನು ಕಳೆದುಕೊಂಡಿರುವುದು ದುರದೃಷ್ಟಕರ, ಆದರೆ ಅದು ಆಟದ ಭಾಗವಾಗಿದೆ' ಎಂದು ದಹಿಯಾ ತಮ್ಮ ಭೇಟಿಯ ವಿವರಗಳನ್ನು ಹಂಚಿಕೊಂಡರು.
Advertisement