ಪ್ಯಾರಿಸ್: ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ದೇಹದ ತೂಕ ಕೇವಲ 100 ಗ್ರಾಮ್ ಹೆಚ್ಚಳವಾಗಿದ್ದಕ್ಕೆ ಒಲಿಂಪಿಕ್ಸ್ ನಲ್ಲಿ ಅನರ್ಹರಾಗಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗತೊಡಗಿದೆ.
ಈ ಮಧ್ಯೆ ಪ್ಯಾರಿಸ್ ಒಲಂಪ್ಪಿಕ್ಸ್ ನಲ್ಲಿ ದುರದೃಷ್ಟದಿಂದ ಫ್ರೆಂಚ್ ನ ಕ್ರೀಡಾಪಟು ಓರ್ವನ ಪದಕದ ಕನಸು ಭಗ್ನಗೊಂಡಿದೆ.
ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸ್ಪರ್ಧಿಸಿದ್ದ ಫ್ರೆಂಚ್ ಅಥ್ಲೀಟ್, ಆಂಟನಿ ಅಮ್ಮಿರತಿ (21) ಅವರು ಬಹುತೇಕ ಗೆದ್ದಿದ್ದರಾದರೂ, ವಿಲಕ್ಷಣ ಎಂಬಂತೆ 5.70 ಮೀಟರ್ ಇದ್ದ ಹೈಟ್ ಬಾರ್ ಗೆ ಅವರ ಮರ್ಮಾಂಗ ತಾಗಿದ್ದರ ಪರಿಣಾಮ ಮೂರನೇ ಯತ್ನದಲ್ಲಿ ಪಂದ್ಯ ಸೋತಿದ್ದಾರೆ.
ಆಂಟನಿ ಅಮ್ಮಿರತಿ ಅವರ ಪೋಲ್ ವಾಲ್ಟ್ ಸ್ಪರ್ಧೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ. ವಿಡಿಯೋಗಳಿಗೆ ಹಲವರು ತರಹೆವಾರಿ ಕಾಮೆಂಟ್ ಮಾಡುತ್ತಿದ್ದು ಲಘು ಧಾಟಿಯಲ್ಲೂ ಕಾಮೆಂಟ್ ಗಳು ಬಂದಿವೆ.
2016 ರಲ್ಲಿ ರಿಯೋ ಒಲಂಪಿಕ್ಸ್ ನಲ್ಲಿ ಜಪಾನ್ ಪೋಲ್ ವಾಲ್ಟರ್ ಹಿರೊಕಿ ಒಗಿತಾ ಅವರೂ ಇದೇ ಮಾದರಿಯಲ್ಲಿ ಸೋತಿದ್ದರು.
Advertisement