
ಚೆನ್ನೈ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬುಧವಾರ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಟರ್ಕಿಯ ಎದುರಾಳಿ ಝೆನೆಪ್ ಯೆಟ್ಗಿಲ್ ವಿರುದ್ಧ ಸೋತು 53 ಕೆಜಿ ಸ್ಪರ್ಧೆಯಿಂದ ಹೊರಬಿದ್ದ ಭಾರತದ ಕುಸ್ತಿಪಟು ಅಂತಿಮ್ ಪಂಘಾಲ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ಮನೆಗೆ ಕಳುಹಿಸುವ ಸಾಧ್ಯತೆಯಿದೆ.
ಹರಿಯಾಣದ 19 ವರ್ಷದ ಕುಸ್ತಿಪಟು ತನ್ನ ಪಂದ್ಯದ ನಂತರ ಕ್ರೀಡಾ ಗ್ರಾಮ ತೊರೆದು ತನ್ನ ತರಬೇತುದಾರ ಮತ್ತು ಸಹೋದರಿ ತಂಗಿದ್ದ ಹೋಟೆಲ್‌ಗೆ ತೆರಳಿದ್ದಾರೆ.
ತಮಗೆ ಸೇರಿದ ವಸ್ತುಗಳನ್ನು ಒಲಿಂಪಿಕ್ಸ್ ಕ್ರೀಡಾ ಗ್ರಾಮದಿಂದ ತೆಗೆದುಕೊಂಡು ಬರುವಂತೆ ಹೇಳಿ ಅಂತಿಮ್ ತಮ್ಮ ಸಹೋದರಿಯನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಿದ್ದರು. ಈ ವೇಳೆ ಅಧಿಕೃತ ಮಾನ್ಯತೆಯ ಕಾರ್ಡ್ ಗಳನ್ನು ಸಹೋದರಿ ಕೈಗೆ ಕೊಟ್ಟಿದ್ದರು. ಕ್ರೀಡಾ ಗ್ರಾಮದಿಂದ ಹೊರ ಹೋಗುವ ವೇಳೆ ಸಹೋದರಿ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಭದ್ರತಾ ಸಿಬ್ಬಂದಿ ಅಂತಿಮ್ ಅವರ ಸಹೋದರಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ತದನಂತರ ಅಂತಿಮ್ ಅವರನ್ನು ಕರೆದು ಹೇಳಿಕೆ ಪಡೆದಿದ್ದಾರೆ. ಐಒಎ ಕ್ರೀಡಾಕೂಟದಲ್ಲಿ ಭಾರತೀಯ ತಂಡಕ್ಕೆ ಜವಾಬ್ದಾರರಾಗಿರುವ ಅಧಿಕಾರಿಗಳಿಗೆ ಬೆಳವಣಿಗೆಗಳ ಬಗ್ಗೆ ತಿಳಿಸಲಾಗಿದೆ. ಅಂತಿಮ್ ಮಾನ್ಯತೆ ರದ್ಧು ಮಾಡಿ ಘಟನೆಯಲ್ಲಿ ಭಾಗಿಯಾಗಿರುವ ಅಂತಿಮ್ ಮತ್ತು ಇತರರನ್ನು ಇಂದು ರಾತ್ರಿ (ಬುಧವಾರ ರಾತ್ರಿ) ಭಾರತಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧಿಕಾರಿಗಳು ಪೊಲೀಸರೊಂದಿಗೆ ಮಾತನಾಡಿದ್ದಾರೆ ಮತ್ತು ಅಂತಿಮ್ ಅವರ ಸಹೋದರಿಯನ್ನು ಬಂಧಿಸದಂತೆ ವಿನಂತಿಸಿದ್ದಾರೆ. ಮನವಿಗೆ ಸ್ಪಂದಿಸಿದ ಪೊಲೀಸರು ಅವರನ್ನು ಹೋಟೆಲ್‌ಗೆ ವಾಪಸ್ ಕಳುಹಿಸಿದ್ದಾರೆ. ಅವರೆಲ್ಲರಿಗೂ ಹೋಟೆಲ್ ಕೊಠಡಿಯಿಂದ ಹೊರಗೆ ಹೋಗದಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಂತಿಮ್ ಜೊತೆ ಇತರರನ್ನು ಸಾಧ್ಯವಾದಷ್ಟು ಬೇಗ ಪ್ಯಾರಿಸ್‌ನಿಂದ ಹೊರಕಳುಹಿಸಲು IOA ಗುರುವಾರ ಬೆಳಿಗ್ಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. "ಘಟನೆಯ ನಂತರ, ಅಂತಿಮ್ ಮಾನ್ಯತೆಯನ್ನು ರದ್ದುಗೊಳಿಸಲಾಗಿದೆ. IOA ಈ ಸಮಸ್ಯೆಯನ್ನು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದೊಂದಿಗೆ ಚರ್ಚಿಸಲಾಗುವುದು ಎಂದು ಹೇಳಲಾಗಿದೆ. ಮಂಗಳವಾರವೂ ಕುಸ್ತಿಪಟು ಕ್ರೀಡಾ ಗ್ರಾಮದಿಂದ ನಾಪತ್ತೆಯಾಗಿದ್ದರು ಎಂದು ಮತ್ತೊಂದು ಮೂಲವು ತಿಳಿಸಿದೆ.
ತನಗೆ ಮತ್ತು ತನ್ನ ಸಹೋದರಿಯೊಂದಿಗೆ ತರಬೇತುದಾರ, ಫಿಸಿಯೋಥೆರಪಿಸ್ಟ್ ಮತ್ತು ತನ್ನ ಸಹಾಯಕ ಸಿಬ್ಬಂದಿಗೆ ಬುಧವಾರ ಭಾರತಕ್ಕೆ ಮರಳಲು ಟಿಕೆಟ್ ನೀಡುವಂತೆ ಅವರು ವಿನಂತಿಸಿದ್ದರು ಎಂದು ಮೂಲಗಳು ತಿಳಿಸಿವೆ.
ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿದ ಅವರು ಗುರುವಾರ ರಿಟರ್ನ್ ಟಿಕೆಟ್‌ಗಾಗಿ ವಿನಂತಿಸಿದರು. "ಶಿಸ್ತು ಉಲ್ಲಂಘನೆಯನ್ನು ಫ್ರೆಂಚ್ ಅಧಿಕಾರಿಗಳು IOA ಗಮನಕ್ಕೆ ತಂದ ನಂತರ ಕುಸ್ತಿಪಟು ಅಂತಿಮ್ ಮತ್ತು ಅವರ ಸಹಾಯಕ ಸಿಬ್ಬಂದಿಯನ್ನು ವಾಪಸ್ ಕಳುಹಿಸಲ ಭಾರತೀಯ ಒಲಿಂಪಿಕ್ ಸಂಸ್ಥೆ ನಿರ್ಧರಿಸಿದೆ ಎಂದು ಅಧಿಕೃತ IOA ಪ್ರಕಟಣೆ ತಿಳಿಸಿದೆ.
Advertisement