ಪ್ಯಾರಿಸ್: ಭಾರತದ ಕುಸ್ತಿಪಟು ರೀತಿಕಾ ಹೂಡಾ ಇಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಿರ್ಗಿಸ್ತಾನ್‌ನದ ಅಪರಿ ಮೆಡೆಟ್ ಕೈಜಿ ವಿರುದ್ಧ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತಿದ್ದು ಈ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಈ ಸೋಲಿನೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವಿಲ್ಲದೆ ಭಾರತದ ಅಭಿಯಾನ ಅಂತ್ಯಗೊಂಡಿದೆ.
ಭಾರತದ ಯುವ ಕುಸ್ತಿಪಟು 21 ವರ್ಷದ ರಿತಿಕಾ ಹೂಡಾ ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕಿರ್ಗಿಸ್ತಾನ್‌ನ ಅಪರಿ ಮೆಡೆಟ್ ಕೈಜಿ ಅವರ ವಿರುದ್ಧ ಸೋತಿದ್ದಾರೆ. ಇವರಿಬ್ಬರ ನಡುವಿನ ಪಂದ್ಯ 6 ನಿಮಿಷಗಳ ಬಳಿಕ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯಗೊಂಡಿತು. ಆದರೆ ಪಂದ್ಯದಲ್ಲಿ ಕೊನೆಯ ಅಂಕವನ್ನು ಕಿರ್ಗಿಸ್ತಾನದ ಅಪರಿ ಮೆಡೆಟ್ ಕೈಜಿ ಗಳಿಸಿದರು. ಈ ಕಾರಣಕ್ಕಾಗಿ ಅವರನ್ನು ಈ ಪಂದ್ಯದ ವಿಜೇತೆ ಎಂದು ಘೋಷಿಸಲಾಯಿತು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಿತಿಕಾ ಕಿರ್ಗಿಸ್ತಾನದ ವಿಶ್ವ ಚಾಂಪಿಯನ್ ಕುಸ್ತಿಪಟುವಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಿಲ್ಲ. ಇಡೀ ಬೌಟ್‌ನಲ್ಲಿ ರಿತಿಕಾ ತನ್ನ ಬಲ ಪ್ರದರ್ಶಿಸಿದರು. ಆದರೆ ದುರದೃಷ್ಟವಶಾತ್ ಅವರು ಸೋಲು ಎದುರಿಸಬೇಕಾಯಿತು.
Advertisement