
ನವದೆಹಲಿ: ಕನಿಷ್ಠ ಐದು ಚಿನ್ನ ಸೇರಿದಂತೆ ಒಟ್ಟು 12 ಪದಕಗಳ ಮೇಲೆ ಕಣ್ಣಿಟ್ಟಿರುವ ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಅಂಟಿಲ್ ನೇತೃತ್ವದ ಭಾರತೀಯ ಪ್ಯಾರಾ ಕ್ರೀಡಾಪಟುಗಳ ಒಂದು ತಂಡ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಲು ಪ್ಯಾರಿಸ್ ಗೆ ಪ್ರಯಾಣಿಸಿದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಮುಂಚಿತವಾಗಿ ಅಲ್ಲಿಗೆ ತೆರಳಿದೆ.
ಉದ್ಘಾಟನಾ ಸಮಾರಂಭ ನಡೆಯುವ ಮೂರು ದಿನಗಳ ಮುಂಚಿತವಾಗಿ ಆಗಸ್ಟ್ 25 ರಂದು ಕ್ರೀಡಾಗ್ರಾಮವನ್ನು ಪ್ರವೇಶಿಸಲಿರುವ ಭಾರತದ 16 ಪ್ಯಾರಾ ಅಥ್ಲೀಟ್ ಗಳು ಕೆಲವು ದಿನಗಳ ಕಾಲ ಪ್ಯಾರಿಸ್ ನ ಹೋಟೆಲ್ ಗಳಲ್ಲಿ ತಂಗಲಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ತನ್ನಲ್ಲೇ ಉಳಿಸಿಕೊಂಡ ಭಾರತದ ಮೊದಲ ಅಥ್ವೀಟ್ ಎನಿಸಿಕೊಳ್ಳುವತ್ತ ಗಮನ ಹರಿಸಿರುವ ಸುಮಿತ್ ಅಂಟಿಲ್, ಪ್ಯಾರಿಸ್ ನಲ್ಲಿ ತರಬೇತಿ ನಡೆಸಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಲಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆಗಳು ಆಗಸ್ಚ್ 30 ರಿಂದ ಸೆಪ್ಟೆಂಬರ್ 8ರ ತನಕ ಸ್ಡೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುಮಿತ್ ಅಂಟಿಲ್ ಮತ್ತಿತರ ಪ್ಯಾರಾ ಅಥ್ಲೀಟ್ ಗಳು ಕ್ರೀಡಾಗ್ರಾಮ ಪ್ರವೇಶಿಸುವ ಮೊದಲು ನೆಲ್ಸನ್ ಮಂಡೇಲ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕೆಲವು ದಿನಗಳ ಕಾಲ ಅಭ್ಯಾಸ ನಡೆಸಲಿದ್ದಾರೆ. ಕೆಲವರು ಕ್ರೀಡಾಗ್ರಾಮದ ಸಮೀಪ ತಂಗಲಿದ್ದು, ಹಗಲು ಹೊತ್ತಿನಲ್ಲಿ ತರಬೇತಿ ಸೌಲಭ್ಯಗಳನ್ನು ಬಳಸಿಕೊಳ್ಳಲಿದ್ದಾರೆ ಎಂದು ಪ್ಲಾರಾ ಅಥ್ಲೆಟಿಕ್ಸ್ ಮುಖ್ಯ ಕೋಚು ಸತ್ಯನಾರಾಯಣ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ನೆಲ್ಸನ್ ಮಂಡೇಲ ಸ್ಫೋರ್ಟ್ ಕಾಂಪ್ಲೆಕ್ಸ್ ಸ್ಟೇಡ್ ಡಿ ಫ್ರಾನ್ಸ್ ನಿಂದ ಸುಮಾರು 5 ಕಿ. ಮೀ ದೂರದಲ್ಲಿದೆ. ಇದು ಅಥ್ಲೆಟಿಕ್ಸ್, ರಗ್ಬಿ, ಟೆನಿಸ್, ವೀಲ್ಹ್ ಚೇರ್ ಟೆನಿಸ್ ಹಾಗೂ ಸ್ಟಿಮ್ಮಿಂಗ್ ಗಾಗಿ ಅತ್ಯಾಧುನಿಕ ತರಬೇತಿ ಸೌಲಭ್ಯಗಳನ್ನು ಹೊಂದಿದೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾ ಅಥ್ಲೀಟ್ ಗಳ ಪದಕ ನಿರೀಕ್ಷೆ ಕುರಿತು ಮತಾನಾಡಿದ ಸತ್ಯನಾರಾಯಣ, ನಾವು ಕನಿಷ್ಠ ಐದು ಚಿನ್ನ ಮತ್ತು ಒಟ್ಟು 12 ಪದಕಗಳ ಗುರಿಯನ್ನು ಹೊಂದಿದ್ದೇವೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವಾಗಿರಲಿದೆ ಎಂದು ಹೇಳಿದರು.
ಮೇ ತಿಂಗಳಲ್ಲಿ ಜಪಾನ್‌ನ ಕೋಬ್‌ನಲ್ಲಿ ನಡೆದ 2024 ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಆರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಗಳಿಸಿತ್ತು. ಈ ಅಭೂತಪೂರ್ವ ಯಶಸ್ಸಿನಿಂದ ಸತ್ಯನಾರಾಯಣ ಅವರು 5 ಚಿನ್ನದ ಪದಕ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದಾರೆ.
ಸುಮಿತ್ ಅಂಟಿಲ್(ಪುರುಷರ ಜಾವೆಲಿನ್ ಎಫ್64), ದೀಪ್ತಿ ಜೀವನ್ಜಿ(ಮಹಿಳೆಯರ 400 ಮೀ.ಟಿ20), ಸಚಿನ್ ಖಿಲಾರಿ(ಪುರುಷರ ಶಾಟ್ಪುಟ್ ಎಫ್ 46), ಎಕ್ತಾ ಭಯಾನ್(ಮಹಿಳೆಯರ ಕ್ಲಬ್ ಥ್ರೋ ಎಫ್ 51) ಸಿಮ್ರಾನ್ ಶರ್ಮಾ (ಮಹಿಳೆಯರ 200 ಮಿ.ಟಿ 12) ಹಾಗೂ ಮರಿಯಪ್ಪನ್ ತಂಗವೇಲು (ಪುರುಷರ ಹೈಜಂಪ್ ಟಿ-42) ಚಿನ್ನದ ಪದಕಗಳನ್ನು ಜಯಿಸಿದ್ದರು.
ಸುಮಿತ್ ಅಂಟಿಲ್ ಹಾಗೂ ಹಾಂಗೌ ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ ಶಾಟ್ಪುಟ್ ಎಫ್ 34ರಲ್ಲಿ ಬೆಳ್ಳಿ ಪದಕ ಪಡೆದ್ದ ಭಾಗ್ಯಶ್ರೀ ಜಾಧವ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭ ಇದೇ ಮೊದಲ ಬಾರಿಗೆ ಕ್ರೀಡಾಂಗಣದಿಂದ ಹೊರಗೆ ನಡೆಯಲಿದೆ.
Advertisement