
ಪ್ಯಾರಿಸ್: ಟೊಕಿಯೋ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ ಶೂಟರ್ ಮನೀಶ್ ನರ್ವಾಲ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನ ಪುರುಷರ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
22 ವರ್ಷದ ಮನೀಷ್, 3 ವರ್ಷದ ಹಿಂದೆ ಟೊಕಿಯೋದಲ್ಲಿ 50 ಮೀಟರ್ ಪಿಸ್ತೂಲ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಬಾರಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ವಿಭಾಗದಲ್ಲಿ ನಂ.5ನೇ ಸ್ಥಾನದಲ್ಲಿದ್ದ ಅವರು ಈಗ ಅಗ್ರಸ್ಥಾನಕ್ಕೇರಿದ್ದಾರೆ.
234.9 ಸ್ಕೋರ್ ಮೂಲಕ ಬೆಳ್ಳಿಯ ಪದಕ ಗೆದ್ದಿದ್ದು, ಚಿನ್ನದ ಪದಕ ಕೆಲವೇ ಕೆಲವು ಅಂಕಗಳಿಂದ ಕೈ ತಪ್ಪಿದೆ. ದಕ್ಷಿಣ ಕೊರಿಯಾದ ಅನುಭವಿ ಗುರಿಕಾರ, 37 ವರ್ಷ ವಯಸ್ಸಿನ ಜೋ ಜಿಯೊಂಗ್ಡು 237.4 ಅಂಕಗಳೊಂದಿಗೆ ಚಿನ್ನವನ್ನು ಗೆದ್ದಿದ್ದು ಪ್ಯಾರಾಲಿಂಪಿಕ್ ಕ್ರೀಡಾಕೂಟದ ದಾಖಲೆಯನ್ನು ಕೇವಲ ದಶಮಾಂಶಗಳಿಂದ ಕಳೆದುಕೊಂಡರು.
ಶೂಟರ್‌ಗಳ ಕುಟುಂಬದಿಂದ ಬಂದಿರುವ ಮತ್ತು ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನವನ್ನು ಪಡೆದಿರುವ ಮನೀಶ್ ಐದನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಎಂಟು ಮಂದಿಯ ಫೈನಲ್ ಪ್ರವೇಶಿಸಲು ಮನೀಶ್ ಒಟ್ಟು 565 ಅಂಕ ಗಳಿಸಿದ್ದರು. ಈವೆಂಟ್‌ನಲ್ಲಿನ ಮತ್ತೋರ್ವ ಭಾರತೀಯ, 17 ವರ್ಷದ ರುದ್ರಾಂಶ್ ಕಹೆಂಡೆಲ್ವಾಲ್ ಒಟ್ಟು 561 ಸ್ಕೋರ್‌ನೊಂದಿಗೆ ಒಂಬತ್ತನೇ ಸ್ಥಾನ ಗಳಿಸಿ ಫೈನಲ್ ನಿಂದ ಹೊರಗುಳಿದರು.
Advertisement