
ಬ್ಯಾಡ್ಮಿಂಟನ್ ಚಾಂಪಿಯನ್ ಪಿವಿ ಸಿಂಧು ಅವರು ಇಂದು ಉದಯಪುರದಲ್ಲಿ ತೆಲುಗು ಸಂಪ್ರದಾಯದಂತೆ ವೆಂಕಟ್ ದತ್ತಾ ಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆಯಿತು. ದಂಪತಿಗಳು ಇನ್ನೂ ಅಧಿಕೃತ ಫೋಟೋಗಳನ್ನು ಹಂಚಿಕೊಂಡಿಲ್ಲವಾದರೂ, ಈವೆಂಟ್‌ನ ಹಲವಾರು ಗ್ಲಿಂಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಸಮಾರಂಭದ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ನವ ದಂಪತಿಗಳಿಗೆ ಆಶೀರ್ವಾದಿಸಿದರು. ಡಿಸೆಂಬರ್ 24ರಂದು ಸಿಂಧು ಅವರ ತವರು ಹೈದರಾಬಾದ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ವರ ವೆಂಕಟ್ ದತ್ತಾ ಸಾಯಿ ಹೈದರಾಬಾದ್ ಮೂಲದ ಉದ್ಯಮಿಯಾಗಿದ್ದು, ಪೊಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಚಿಕೆ ಸ್ವಭಾವದ ದತ್ತಾ ಸಾಯಿ ಹೆಚ್ಚಿನವರ ಕಣ್ಣುಗಳಿಂದ ದೂರ ಉಳಿದಿದ್ದರು. ಆದರೆ ಮದುವೆಯ ಘೋಷಣೆಯ ನಂತರ ಎಲ್ಲರ ಗಮನ ಸೆಳೆದಿದ್ದಾರೆ.
Advertisement