FIDE 2024: ಎರಡನೇ ಬಾರಿ ರಾಪಿಡ್ ಚೆಸ್ ವಿಶ್ವ ಚಾಂಪಿಯನ್ ಆದ ಕೊನೆರು ಹಂಪಿ

ಕೊನೆರು ಹಂಪಿ ಅವರ ಇಂದಿನ ಸಾಧನೆಯಿಂದ ಭಾರತ ಚೆಸ್ ನಲ್ಲಿ ಇನ್ನಷ್ಟು ಸಾಧನೆ ಮಾಡಿದೆ. ಇದಕ್ಕೂ ಮುನ್ನ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಸಿಂಗಾಪುರದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.
Koneru Hampi
ಕೊನೆರು ಹಂಪಿ
Updated on

ನವದೆಹಲಿ: ಭಾರತದ ಗ್ರ್ಯಾಂಡ್ ಮಾಸ್ಟರ್ ಕೊನೆರು ಹಂಪಿ ಇಂದು ಭಾನುವಾರ ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಸೋಲಿಸುವ ಮೂಲಕ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಅವರು ಈ ಹಿಂದೆ 2019 ರಲ್ಲಿ ಜಾರ್ಜಿಯಾದಲ್ಲಿ ಪಂದ್ಯಾವಳಿಯನ್ನು ಗೆದ್ದು ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿಯನ್ನು ಪಡೆದ ಚೀನಾದ ಜು ವೆನ್ಜುನ್ ಅವರ ಸಾಲಿಗೆ ಸೇರಿಕೊಂಡಿದ್ದಾರೆ.

ಕೊನೆರು ಹಂಪಿ ಅವರ ಇಂದಿನ ಸಾಧನೆಯಿಂದ ಭಾರತ ಚೆಸ್ ನಲ್ಲಿ ಇನ್ನಷ್ಟು ಸಾಧನೆ ಮಾಡಿದೆ. ಇದಕ್ಕೂ ಮುನ್ನ ಡಿ ಗುಕೇಶ್ ಅವರು ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಸಿಂಗಾಪುರದಲ್ಲಿ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು. ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ದೇಶವು ತನ್ನ ಮೊದಲ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಕೊನೆರು ಹಂಪಿ ಅವರು 11 ಅಂಕಗಳಲ್ಲಿ 8.5 ಅಂಕಗಳೊಂದಿಗೆ ಪಂದ್ಯಾವಳಿಯನ್ನು ಪೂರ್ಣಗೊಳಿಸಿದರು.

ಈ ಗೆಲುವು ತುಂಬಾ ಅನಿರೀಕ್ಷಿತವಾಗಿದೆ ಏಕೆಂದರೆ ಇಡೀ ವರ್ಷ ನಾನು ಸಾಕಷ್ಟು ಕಷ್ಟಪಡುತ್ತಿದ್ದೇನೆ. ಇದಕ್ಕೂ ಮುಂದಿನ ಪಂದ್ಯದಲ್ಲಿ ಸೋತಿದ್ದೇನೆ. ಇಂದಿನ ಗೆಲುವು ಅಚ್ಚರಿಯಾಗಿದೆ ಎಂದಿದ್ದಾರೆ.

ಭಾರತಕ್ಕೆ ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಈಗ ನಾನು ರ್ಯಾಪಿಡ್ ಪಂದ್ಯದಲ್ಲಿ ಎರಡನೇ ವಿಶ್ವ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಇದು ಬಹಳಷ್ಟು ಯುವಕರನ್ನು ವೃತ್ತಿಪರವಾಗಿ ಚೆಸ್ ನಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬಹುದು ಎಂದರು.

Koneru Hampi
ನಾನು ಆರು ವರ್ಷದ ಬಾಲಕನಾಗಿದ್ದಾಗಲೇ ಚಾಂಪಿಯನ್ ಆಗುವ ಕನಸು ಕಾಣುತ್ತಿದ್ದೆ: ಡಿ ಗುಕೇಶ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com