ನೂತನ ಆಡಳಿತ ಮಂಡಳಿ ಅಮಾನತು ಪ್ರಶ್ನಿಸಿ ಮುಂದಿನ ವಾರ ಕೋರ್ಟ್ ಮೆಟ್ಟಿಲೇರಲಿದೆ WFI

ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ಆಡಳಿತ ಮಂಡಳಿಯನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮ ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದ ಮೊರೆ ಹೋಗಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ ಮತ್ತು ಮುಂದಿನ ನಡೆ...
ಸಂಜಯ್ ಸಿಂಗ್ (ಬಲಗಡೆ)
ಸಂಜಯ್ ಸಿಂಗ್ (ಬಲಗಡೆ)
Updated on

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ನ ಆಡಳಿತ ಮಂಡಳಿಯನ್ನು ಅಮಾನತು ಮಾಡಿರುವ ಕೇಂದ್ರ ಕ್ರೀಡಾ ಸಚಿವಾಲಯದ ಕ್ರಮ ಪ್ರಶ್ನಿಸಿ ಮುಂದಿನ ವಾರ ನ್ಯಾಯಾಲಯದ ಮೊರೆ ಹೋಗಲು ಡಬ್ಲ್ಯುಎಫ್‌ಐ ನಿರ್ಧರಿಸಿದೆ ಮತ್ತು ಮುಂದಿನ ನಡೆ ಬಗ್ಗೆ ಚರ್ಚಿಸಲು ಜನವರಿ 16 ರಂದು ದೆಹಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆ ಉಲ್ಲಂಘನೆ ಮತ್ತು WFI ಸಂವಿಧಾನ ಉಲ್ಲಂಘನೆಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಡಿಸೆಂಬರ್ 24 ರಂದು ಕುಸ್ತಿ ಫೆಡರೇಶನ್ ನ ನೂತನ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿದೆ.

"ನಮಗೆ ಸರಿಯಾಗಿ ಕಾರ್ಯನಿರ್ವಹಿಸುವ ಫೆಡರೇಶನ್ ಅಗತ್ಯವಿದೆ. ನಾವು ಮುಂದಿನ ವಾರ ಈ ವಿಷಯವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ. ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವುದರಿಂದ ಈ ಅಮಾನತು ಸ್ವೀಕಾರಾರ್ಹವಲ್ಲ ಎಂದು WFI ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ. 

ನಾವು ಸಂವಿಧಾನ ಬದ್ಧವಾಗಿ ಚುನಾವಣೆ ನಡೆದು ಆಯ್ಕೆಯಾಗಿದ್ದೇವೆ. ಅದನ್ನು ಕ್ರೀಡಾ ಸಚಿವಾಲಯ ಕಡೆಗಣಿಸಲು ಹೇಗೆ ಸಾಧ್ಯ? ಅಮಾನತು ಮತ್ತು ಸ್ವತಂತ್ರ ಸಮಿತಿಯನ್ನು ನಾವು ಪರಿಗಣಿಸಲ್ಲ. ನಮ್ಮ ಸಮಿತಿಯೇ ಈಗಲೂ ಕಾರ್ಯನಿರ್ವಹಿಸುತ್ತಿದೆ. ಸಮಿತಿಯ ಸಭೆ ಕರೆದು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತೇವೆ. ನಮ್ಮ ರಾಜ್ಯ ಸಮಿತಿಗಳು ಆಟಗಾರರನ್ನು ಕಳುಹಿಸದಿದ್ದರೆ ಸ್ವತಂತ್ರ ಸಮಿತಿ ಹೇಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಆಯೋಜಿಸುತ್ತದೆ ಎಂದು ಸಂಜಯ್‌ ಸಿಂಗ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com