ಅಂಕಿತಾ ಭಗತ್
ಅಂಕಿತಾ ಭಗತ್

Olympics 2024: ಅಂಕಿತಾ ಭಗತ್ ಬೃಹತ್ ಅಂಕ ಗಳಿಕೆ; ಆರ್ಚರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

ಪ್ಯಾರಿಸ್ ಒಲಿಂಪಿಕ್ಸ್‌ನ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಉತ್ತಮ ಪ್ರದರ್ಶನ ನೀಡಿದೆ. ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಭಜನ್ ಕೌರ್ ಭಾರತಕ್ಕೆ ಒಟ್ಟು 1,983 ಅಂಕಗಳನ್ನು ನೀಡಿದ್ದಾರೆ.
Published on

ಪ್ಯಾರಿಸ್ ಒಲಿಂಪಿಕ್ಸ್‌ನ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಉತ್ತಮ ಪ್ರದರ್ಶನ ನೀಡಿದೆ. ದೀಪಿಕಾ ಕುಮಾರಿ, ಅಂಕಿತಾ ಭಗತ್ ಮತ್ತು ಭಜನ್ ಕೌರ್ ಭಾರತಕ್ಕೆ ಒಟ್ಟು 1,983 ಅಂಕಗಳನ್ನು ನೀಡಿದ್ದಾರೆ.

ಇದರೊಂದಿಗೆ ಭಾರತ ತಂಡ ನಾಲ್ಕನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ವೈಯಕ್ತಿಕ ಸ್ಕೋರ್ ಕುರಿತು ಹೇಳಬೇಕೆಂದರೆ ಅಂಕಿತಾ ಭಗತ್ ಅವರು 72 ಶಾಟ್‌ಗಳನ್ನು ಹೊಡೆಯುವ ಮೂಲಕ ಒಟ್ಟು 666 ಅಂಕಗಳನ್ನು ಗಳಿಸಿ 11ನೇ ಸ್ಥಾನದಲ್ಲಿ ನಿಂತರು.

ಭಾರತೀಯ ಅಥ್ಲೀಟ್‌ಗಳ ವೈಯಕ್ತಿಕ ಪ್ರದರ್ಶನವನ್ನು ಗಮನಿಸಿದರೆ ಅಂಕಿತಾ 11ನೇ ಸ್ಥಾನದಲ್ಲಿದ್ದರೆ, ಭಜನ್ ಕೌರ್ 22ನೇ ಹಾಗೂ ದೀಪಿಕಾ ಕುಮಾರಿ 23ನೇ ಸ್ಥಾನದಲ್ಲಿದ್ದಾರೆ. ದ್ವಿತೀಯಾರ್ಧದ ಕೊನೆಯ ಎರಡು ಸೆಟ್‌ಗಳಲ್ಲಿ ಅಂಕಿತಾ ಅದ್ಭುತ ಪುನರಾಗಮನ ಮಾಡಿದರು. ಇದರಲ್ಲಿ ಅವರು 120 ರಲ್ಲಿ 112 ಅಂಕಗಳನ್ನು ಗಳಿಸಿದರು. ಕೊನೆಯ ಕ್ಷಣಗಳಲ್ಲಿ, ವಿಶೇಷವಾಗಿ 18 ವರ್ಷದ ಭಜನ್ ಕೌರ್ ಅವರಿಂದ ಅತ್ಯಂತ ಕಳಪೆ ಪ್ರದರ್ಶನ ಕಂಡುಬಂದಿದೆ. ಅವರು ಒಟ್ಟು 659 ಅಂಕಗಳನ್ನು ಸಂಗ್ರಹಿಸಿದರು. ದೀಪಿಕಾ ಅವರಿಗಿಂತ ಒಂದು ಅಂಕ ಹಿಂದಿದ್ದು, 658 ಅಂಕಗಳೊಂದಿಗೆ ರ‍್ಯಾಂಕಿಂಗ್ ಸುತ್ತನ್ನು ಮುಗಿಸಿದರು.

ಅಂಕಿತಾ ಭಗತ್
ಪ್ಯಾರೀಸ್ ಒಲಿಂಪಿಕ್ಸ್: ರಾಜ್ಯದ ಒಂಬತ್ತು ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ಘೋಷಣೆ

ಭಾರತ ಕ್ವಾರ್ಟರ್‌ಫೈನಲ್‌ ಪ್ರವೇಶ

ನಿಯಮಗಳ ಕುರಿತಂತೆ ಹೇಳಬೇಕೆಂದರೆ, ತಂಡದ ಪಟ್ಟಿಯಲ್ಲಿ ಅಗ್ರ-4 ಸ್ಥಾನ ಪಡೆಯುವ ತಂಡಗಳು ಟೀಮ್ ಈವೆಂಟ್‌ನ ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಪಡೆಯುತ್ತವೆ. ಭಾರತ 1983 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರಿಂದ, ಅದು ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದೆ. ಭಾರತ ಈಗ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಮತ್ತು ನೆದರ್‌ಲ್ಯಾಂಡ್ಸ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಆದರೆ ತಂಡದ ಶ್ರೇಯಾಂಕದಲ್ಲಿ 5 ರಿಂದ 12ನೇ ಸ್ಥಾನದಲ್ಲಿರುವ ತಂಡಗಳು ಮೊದಲು 16ರ ಸುತ್ತಿನ ಮೂಲಕ ಹೋಗಬೇಕಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com