ಮಹಿಳಾ ಫುಟ್‌ಬಾಲ್ ಆಟಗಾರರ ಮೇಲೆ ಹಲ್ಲೆ: ಕಠಿಣ ಕಾನೂನು ಕ್ರಮಕ್ಕೆ ಅನುರಾಗ್ ಠಾಕೂರ್ ಆದೇಶ

ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಲೀಗ್ ಟೂರ್ನಮೆಂಟ್‌ನಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಸದಸ್ಯರಿಂದ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಮಹಿಳಾ ಫುಟ್‌ಬಾಲ್ ಆಟಗಾರರು ಆರೋಪಿಸಿದ್ದಾರೆ.
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಲೀಗ್ ಟೂರ್ನಮೆಂಟ್‌ನಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಸದಸ್ಯರಿಂದ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಮಹಿಳಾ ಫುಟ್‌ಬಾಲ್ ಆಟಗಾರರು ಆರೋಪಿಸಿದ್ದಾರೆ.

ಇನ್ನೂ ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಎಐಎಫ್‌ಎಫ್‌ಗೆ ಸೂಚಿಸಿದ್ದಾರೆ.

ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಲೀಗ್‌ನಲ್ಲಿ ಮಹಿಳಾ ಫುಟ್‌ಬಾಲ್ ಆಟಗಾರರ ಮೇಲೆ ಅಧಿಕಾರಿಯೊಬ್ಬರು ನಡೆಸಿದ ದೈಹಿಕ ಹಲ್ಲೆಯನ್ನು ಕ್ರೀಡಾ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದೆ.

ಅನುರಾಗ್ ಠಾಕೂರ್
ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ಬ್ಯಾನ್: ಫಿಫಾ ಅತ್ಯಂತ ಕಠಿಣ ನಿರ್ಧಾರ- ಬೈಚುಂಗ್ ಭುಟಿಯಾ

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ತ್ವರಿತ ಕ್ರಮ ಕೈಗೊಳ್ಳಲು ಮತ್ತು ನಮ್ಮ ಫುಟ್ಬಾಲ್ ಆಟಗಾರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ. ಎಐಎಫ್‌ಎಫ್‌ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವಾಲಯಕ್ಕೆ ತಿಳಿಸುವಂತೆ ನಿರ್ದೇಶನ ನೀಡಿದೆ. ಆಟಗಾರರ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಖಾಡ್ ಎಫ್‌ಸಿ ಕ್ಲಬ್‌ನ ಇಬ್ಬರು ಮಹಿಳಾ ಫುಟ್‌ಬಾಲ್ ಆಟಗಾರರು ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಲೀಗ್ 2 ರ ಸಂದರ್ಭದಲ್ಲಿ ಶರ್ಮಾ ಹೋಟೆಲ್ ಕೋಣೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಫುಟ್ಬಾಲ್ ಆಟಗಾರರು ಶುಕ್ರವಾರ ಎಐಎಫ್‌ಎಫ್‌ಗೆ ದೂರು ಸಲ್ಲಿಸಿದ್ದರು, ಈ ಘಟನೆಯನ್ನು ಎನ್‌ಡಿಟಿವಿ ವರದಿ ಮಾಡಿದೆ. ಘಟನೆ ನಡೆದ ಸಂದರ್ಭದಲ್ಲಿ ಶರ್ಮಾ ಕುಡಿದಿದ್ದರು ಎಂದು ಫುಟ್‌ಬಾಲ್ ಆಟಗಾರರು ಆರೋಪಿಸಿದ್ದಾರೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com