ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಮೊದಲ ಭಾರತೀಯ ಅಧ್ಯಕ್ಷರಾಗಿ ರಣಧೀರ್ ಸಿಂಗ್ ಆಯ್ಕೆ

ಐದು ಬಾರಿ ಒಲಿಂಪಿಕ್ ಶೂಟರ್ ಆಗಿರುವ ರಣಧೀರ್, ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಅವರ ಅಧಿಕಾರವಧಿ 2024 ರಿಂದ 2028ರವರಗೆ ಇರಲಿದೆ.
ರಣಧೀರ್ ಸಿಂಗ್
ರಣಧೀರ್ ಸಿಂಗ್
Updated on

ನವದೆಹಲಿ: ಹಿರಿಯ ಕ್ರೀಡಾ ಆಡಳಿತಗಾರ ರಣಧೀರ್ ಸಿಂಗ್ ಭಾನುವಾರ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ (OCA) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

OCA 44ನೇ ಸಾಮಾನ್ಯ ಸಭೆಯಲ್ಲಿ ರಣಧೀರ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಐದು ಬಾರಿ ಒಲಿಂಪಿಕ್ ಶೂಟರ್ ಆಗಿರುವ ರಣಧೀರ್, ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಅವರ ಅಧಿಕಾರವಧಿ 2024 ರಿಂದ 2028ರವರಗೆ ಇರಲಿದೆ.

77 ವರ್ಷದ ರಣಧೀರ್, 2021 ರಿಂದ ಒಸಿಎ ಹಂಗಾಮಿ ಅಧ್ಯಕ್ಷರಾಗಿದ್ದರು. ಇದಕ್ಕೂ ಮುನ್ನ ಅಧ್ಯಕ್ಷರಾಗಿದ್ದ ಕುವೈತ್ ನ ಶೇಖ್ ಅಹ್ಮದ್ ಅಲ್ -ಫಹಾದ್ -ಅಲ್ -ಸಬಾಹ್ ಅವರನ್ನು ನೈತಿಕ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಮುಂದಿನ 15 ವರ್ಷಗಳ ಕಾಲ ಯಾವುದೇ ಕ್ರೀಡಾ ಆಡಳಿತದ ಹುದ್ದೆ ವಹಿಸಿಕೊಳ್ಳದಂತೆ ಈ ವರ್ಷದ ಮೇ ತಿಂಗಳಲ್ಲಿ ನಿಷೇಧ ವಿಧಿಸಲಾಗಿತ್ತು.

ಭಾರತೀಯ ಮತ್ತು ಏಷ್ಯನ್ ಕ್ರೀಡಾ ಸಂಸ್ಥೆಗಳಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿರುವ ರಣಧೀರ್ ಅವರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45 ದೇಶಗಳ ಉನ್ನತ ಕ್ರೀಡಾ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಒಸಿಎ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ರಣಧೀರ್ ಸಿಂಗ್
ಏಷ್ಯಾ ಒಲಂಪಿಕ್ ಪರಿಷತ್ ಗೆ ಹಂಗಾಮಿ ಮುಖ್ಯಸ್ಥರಾಗಿ ರಣಧೀರ್ ಸಿಂಗ್ ಮುಂದುವರಿಕೆ

ಪಟಿಯಾಲ ಮೂಲದ ರಣಧೀರ್ ಕ್ರೀಡಾಪಟುಗಳ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರ ಚಿಕ್ಕಪ್ಪ, ಮಹಾರಾಜ ಯಾದವೀಂದ್ರ ಸಿಂಗ್, ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು ಮತ್ತು ಐಒಸಿ ಸದಸ್ಯರಾಗಿದ್ದರು. ಅವರ ತಂದೆ ಭಲೀಂದ್ರ ಸಿಂಗ್ ಕೂಡ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, 1947 ಮತ್ತು 1992 ರ ನಡುವೆ ಐಒಸಿ ಸದಸ್ಯರಾಗಿದ್ದರು. ರಣಧೀರ್ 2001 ಮತ್ತು 2014 ರ ನಡುವೆ ಐಒಸಿ ಸದಸ್ಯರಾಗಿದ್ದರು. ನಂತರ ಅವರು ಐಒಸಿಯ ಗೌರವ ಸದಸ್ಯರಾಗಿ ಮುಂದುವರೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com