ಚರಿತ್ರೆ ನಿರ್ಮಿಸಿದ ರೋಹನ್ ಬೋಪಣ್ಣ: ವಿಶ್ವದ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟ ಕೊಡಗಿನ ಕುವರ!

ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್‍ನ ಸೆಮಿಫೈನಲ್ ತಲುಪಿದ ನಂತರ ಪುರುಷರ ಡಬಲ್ಸ್‍ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೋಹನ್ ಬೋಪಣ್ಣ
ರೋಹನ್ ಬೋಪಣ್ಣ

ಮೆಲ್ಬೋರ್ನ್: ಭಾರತದ ರೋಹನ್ ಬೋಪಣ್ಣ ಅವರು ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯನ್ ಓಪನ್‍ನ ಸೆಮಿಫೈನಲ್ ತಲುಪಿದ ನಂತರ ಪುರುಷರ ಡಬಲ್ಸ್‍ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಸಾಧಿಸಿದ ಅತ್ಯಂತ ಹಿರಿಯ ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಜೊತೆಗೂಡಿ ಆರನೆ ಕ್ರಮಾಂಕದ ಅರ್ಜೆಂಟೀನಾ ಜೋಡಿಗಳಾದ ಮ್ಯಾಕ್ಸಿಮೊ ಗೋನ್ಝಾಲೆಝ್ ಹಾಗೂ ಆ್ಯಂಡ್ರೆಸ್ ಮೊಲ್ಟೇನಿ ಅವರನ್ನು ಸುಲಭವಾಗಿ ಪರಾಭವಗೊಳಿಸುವ ಮೂಲಕ 43 ವರ್ಷದ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಮುಕ್ತ ಟೆನಿಸ್ ಕ್ರೀಡಾಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್​ನ ಪುರುಷರ ಡಬಲ್ಸ್​ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಸೆಮಿಫೈನಲ್​ಗೆ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ATP ಡಬಲ್ಸ್​ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಬೋಪಣ್ಣ ಪಾಲಾಗಿದೆ.

ವಿಶ್ವ ನಂ. 3 ಆಗಿದ್ದ ಬೋಪಣ್ಣ ಮತ್ತು ಆಸ್ಟ್ರೇಲಿಯನ್ ಎಬ್ಡೆನ್ ಇಲ್ಲಿ ಒಂದು ಗಂಟೆ 46 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಆರನೇ ಶ್ರೇಯಾಂಕದ ಅರ್ಜೆಂಟೀನಾದ ಜೋಡಿಯಾದ ಮ್ಯಾಕ್ಸಿಮೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ವಿರುದ್ಧ 6-4, 7-6 (5) ಅಂತರದ ಗೆಲುವು ದಾಖಲಿಸಿದರು.

ಎರಡನೇ ಶ್ರೇಯಾಂಕದ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಸೆಮಿಫೈನಲ್‍ನಲ್ಲಿ ಶ್ರೇಯಾಂಕ ರಹಿತ ತೋಮಸ್ ಮಚಾಕ್ ಮತ್ತು ಝಿಜೆನ್ ಝಾಂಗ್ ಅವರೊಂದಿಗೆ ಕಾದಾಡಲಿದ್ದಾರೆ. ಟೂರ್ನಿಯ ಅಂತ್ಯದ ನಂತರ ಬೋಪಣ್ಣ ಹೊಸ ಅಂಕಪಟ್ಟಿ ಅಲಂಕರಿಸಲಿದ್ದಾರೆ.

ಮೂಲತಃ ಕೊಡಗಿನವರಾದ ರೋಹನ್ ಬೋಪಣ್ಣ ತಮ್ಮ 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಇದಕ್ಕೂ ಮುನ್ನ ಎಟಿಪಿ ಡಬಲ್ಸ್ ಶ್ರೇಯಾಂಕ ಪಟ್ಟಿಯಲ್ಲಿ ಯುಎಸ್​ಎ ಆಟಗಾರ ಆಸ್ಟಿನ್ ಕ್ರಾಜಿಸೆಕ್ ಅಗ್ರಸ್ಥಾನದಲ್ಲಿದ್ದರು. ಆದರೆ ಆಸ್ಟ್ರೇಲಿಯನ್ ಓಪನ್​ ಡಬಲ್ಸ್​ನಲ್ಲಿ ಕ್ರಾಜಿಸೆಕ್ ಮತ್ತು ಅವರ ಕ್ರೊಯೇಷಿಯಾದ ಜೊತೆಗಾರ ಇವಾನ್ ಡೋಡಿಗ್ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದಾರೆ. ಇತ್ತ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಸೆಮಿಫೈನಲ್​ಗೇರುವ ಮೂಲಕ ರೋಹನ್ ಬೋಪಣ್ಣ ಟೆನಿಸ್ (ಡಬಲ್ಸ್​) ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ತಮ್ಮ ವೃತ್ತಿಜೀವನದ ಅತ್ಯಂತ ಉನ್ನತ ಕ್ರಮಾಂಕವಾದ ನಂ. 3 ಕ್ರಮಾಂಕದ ಆಟಗಾರರಾಗಿ ಎಬ್ಡೆನ್ ಅವರೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ರೋಹನ್ ಬೋಪಣ್ಣ, ಸೆಮಿಫೈನಲ್ ಪಂದ್ಯದಲ್ಲಿ ಕ್ರಮಾಂಕರಹಿತ ಆಟಗಾರರಾದ ಮ್ಯಾಕಾಕ್ ಹಾಗೂ ಝಿಂಝೆನ್ ಝಾಂಗ್ ಅವರನ್ನು ಎದುರಿಸಲಿದ್ದಾರೆ. ಈ ಭಾರತ-ಆಸ್ಟ್ರೇಲಿಯಾ ಜೋಡಿಯು ಕ್ರೀಡಾಕೂಟದ ಫೈನಲ್ ಪಂದ್ಯದ ಮೇಲೆ ಕಣ್ಣು ನೆಟ್ಟಿದೆ.

ರೋಹನ್ ಬೋಪಣ್ಣ ಅವರು, ಇದುವರೆಗೂ ಡಬಲ್ಸ್ ಕ್ರಮಾಂಕದಲ್ಲಿ ವಿಶ್ವ ನಂ. 1 ಕ್ರಮಾಂಕ ಹೊಂದಿದ್ದ ಹಿರಿಯ ಆಟಗಾರರಾದ ಅಮೆರಿಕಾದ ರಾಜೀವ್ ರಾಮ್ ಅವರನ್ನು ಹಿಂದಿಕ್ಕಲಿದ್ದಾರೆ. ರಾಜೀವ್ ರಾಮ್ ಅವರು ವಿಶ್ವದ ನಂ. 1 ಕ್ರಮಾಂಕವನ್ನು ತಮ್ಮ 38 ನೇ ವಯಸ್ಸಿನಲ್ಲಿ, ಅಕ್ಟೋಬರ್ 2022ರಲ್ಲಿ ತಲುಪಿದ್ದರು.  ಕ್ರೀಡಾಕೂಟ ಮುಕ್ತಾಯಗೊಂಡ ನಂತರ ವಿಶ್ವದ ನಂ. 1 ಪಟ್ಟವನ್ನು ರೋಹನ್ ಬೋಪಣ್ಣ ಅವರ ಮುಡಿಗೇರಲಿದೆ.

2013 ರಲ್ಲಿ ಮೊದಲ ಬಾರಿಗೆ ವಿಶ್ವದ ನಂ. 3 ರ್ಯಾಂಕ್ ಗಳಿಸಿದ್ದ ಬೋಪಣ್ಣ, ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ನಂತರ ಡಬಲ್ಸ್‍ನಲ್ಲಿ ವಿಶ್ವದ ನಂಬರ್ ಒನ್ ರ್ಯಾಂಕ್ ಪಡೆದ ನಾಲ್ಕನೇ ಭಾರತೀಯರಾಗಿದ್ದಾರೆ.ಅವರು ಯುಎಸ್‍ಎಯ ಆಸ್ಟಿನ್ ಕ್ರಾಜಿಸೆಕ್ ಮತ್ತು ಅವರ ಕ್ರೊಯೇಷಿಯಾದ ಪಾಲುದಾರ ಇವಾನ್ ಡೋಡಿಗ್ ಎರಡನೇ ಸುತ್ತಿನಲ್ಲಿ ಸೋತ ನಂತರ ಅಗ್ರ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com