
ಪೋರ್ಚುಗಲ್ ನ ಪ್ರಸಿದ್ಧ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರೊನಾಲ್ಡೊ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಜಾರ್ಜಿನಾ ರೊನಾಲ್ಡೊ ಸೋಷಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ.
ವಿಶ್ವ ಫುಟ್ಬಾಲ್ ದಂತಕಥೆಯ ಸಂಗಾತಿ ಸಾಮಾಜಿಕ ಮಾಧ್ಯಮದಲ್ಲಿ ಹೊಳೆಯುವ ಉಂಗುರವನ್ನು ತೋರಿಸುತ್ತಾ, "ಹೌದು. ಇದರಲ್ಲಿ ಮತ್ತು ನನ್ನ ಜೀವನ ಇದರಲ್ಲಿದೆ" ಎಂಬ ಶೀರ್ಷಿಕೆ ಬರೆದುಕೊಂಡಿದ್ದಾರೆ.
ಇಬ್ಬರೂ ಹಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಒಟ್ಟಿಗೆ ನಾಲ್ಕು ಮಕ್ಕಳನ್ನು ಹೊಂದಿದ್ದಾರೆ. ಜಾರ್ಜಿನಾ ತಮ್ಮ ಮತ್ತು ರೊನಾಲ್ಡೊ ಅವರ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಮೊನ್ನೆ ಸ್ನೇಹಿತರ ದಿನದಂದು ಜೋಡಿ ಕೆಲವು ಆಪ್ತ ಸ್ನೇಹಿತರಿಗೆ ಆತಿಥ್ಯ ವಹಿಸಿ ಸತ್ಕರಿಸುವ ಫೋಟೋಗಳು ವೈರಲ್ ಆಗಿದ್ದವು. ಅದರಿಂದ ತಮ್ಮ ಸಂಬಂಧವನ್ನು ಮತ್ತೊಂದು ಹೊಸ ಮಗ್ಗುಲಿಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಸುದ್ದಿಗೆ ಪುಷ್ಠಿ ನೀಡಿತ್ತು.
ಜಾರ್ಜಿನಾ ನಿಶ್ಚಿತಾರ್ಥ ಉಂಗುರ
ಸೋಷಿಯಲ್ ಮೀಡಿಯಾದಲ್ಲಿ ನಿಶ್ಚಿತಾರ್ಥದ ಉಂಗುರದ ಚಿತ್ರ ಕಾಣಿಸಿಕೊಂಡಂತೆ, ಅದರ ಬೆಲೆಯನ್ನು ಲೆಕ್ಕ ಹಾಕಲು ಹಲವರು ಆರಂಭಿಸಿದರು. ಉಂಗುರವು 5 ಸೆಂಟಿಮೀಟರ್‌ಗಳಿಗಿಂತ ಹೆಚ್ಚು ಉದ್ದವಿದ್ದು, ಎರಡು ಸಣ್ಣ ಕಲ್ಲುಗಳಿಂದ ಸುತ್ತುವರೆದಿರುವ ಪ್ರಮುಖ ಅಂಡಾಕಾರದ ಮಧ್ಯದ ವಜ್ರವನ್ನು ಒಳಗೊಂಡಿದೆ.
ಬ್ರಿಯೋನಿ ರೇಮಂಡ್ ಪ್ರಕಾರ, ಮುಖ್ಯ ಅಂಡಾಕಾರದ ವಜ್ರವು 25-30 ಕ್ಯಾರೆಟ್‌ಗಳ ನಡುವೆ ಇರಬಹುದು, ಕೆಲವು ಆಭರಣ ತಜ್ಞರು ಅಂದಾಜಿಸುವ ಪ್ರಕಾರ, ಇದು ಕನಿಷ್ಠ 15 ಕ್ಯಾರೆಟ್‌ಗಳಾಗಿರಬಹುದು ಎಂದು ಸೂಚಿಸುತ್ತಾರೆ. ಆಭರಣ ವ್ಯಾಪಾರಿ ಫ್ರಾಂಕ್ ಡಾರ್ಲಿಂಗ್‌ನ ಸಂಸ್ಥಾಪಕ ಕೆಗನ್ ಫಿಶರ್ ಪ್ರಕಾರ, ಎರಡು ಬದಿಯ ವಜ್ರಗಳು ಸರಿಸುಮಾರು 1 ಕ್ಯಾರೆಟ್‌ಗಳಷ್ಟು ಕಾಣುತ್ತವೆ.
ವಜ್ರದ ಗುಣಮಟ್ಟ ಮತ್ತು ಗಾತ್ರವು ಇದು ಸಂಪೂರ್ಣವಾಗಿ ಪ್ರೀಮಿಯಂ ಎಂದು ಸೂಚಿಸುತ್ತದೆ, 2-5 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 16.8 ಕೋಟಿಯಿಂದ ರೂ. 42 ಕೋಟಿ) ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿದೆ. ಲೊರೆಲ್ ಡೈಮಂಡ್ಸ್‌ನ ಲಾರಾ ಟೇಲರ್ ಉಂಗುರದ ಕನಿಷ್ಠ ಮೌಲ್ಯ 2 ಮಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಿದರೆ, Rare Carat ಸಿಇಒ ಅಜಯ್ ಆನಂದ್ ಉಂಗುರದ ಮೌಲ್ಯವನ್ನು 5 ಮಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಿದ್ದಾರೆ.
Advertisement