
ವಿಶಾಖಪಟ್ಟಣಂ: ಕೇವಲ 14 ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿ ಸ್ಫೋಟಕ ಶತಕ ಬಾರಿಸುವ ಮೂಲಕ ವಿಶ್ವದಾದ್ಯಂತ ಗಮನ ಸೆಳೆದಿದ್ದ ವೈಭವ್ ಸೂರ್ಯವಂಶಿ ಇದೀಗ ಕಬಡ್ಡಿ ಅಂಗಳದಲ್ಲೂ ಕಾಣಿಸಿಕೊಂಡಿದ್ದಾರೆ.
ಪ್ರೊ ಕಬಡ್ಡಿ ಲೀಗ್‌ನ 12 ನೇ ಸೀಸನ್ ಆಗಸ್ಟ್ 29 ರ ಶುಕ್ರವಾರದಿಂದ ಪ್ರಾರಂಭವಾಗಿದೆ. ಅದರ ಉದ್ಘಾಟನೆಗೆ ವೈಭವ್ ಸೂರ್ಯವಂಶಿ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೈಭವ್ ಅವರನ್ನು ನೋಡಿದ ತಕ್ಷಣ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಇದೇ ವೇಳೆ ಕಬಡ್ಡಿ ಆಟಗಾರರೊಂದಿಗೆ ಕ್ರಿಕೆಟ್ ಆಡಿದ ವೈಭವ್ ಒಂದೊಂದಾಗಿ 3 ಸಿಕ್ಸರ್‌ಗಳನ್ನು ಬಾರಿಸಿದರು.
ಇಲ್ಲಿಯವರೆಗೂ ನಡೆದಿರುವ ಪ್ರೋ ಕಬಡ್ಡಿ ಲೀಗ್ ನ ಉದ್ಘಾಟನಾ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ಪಟು ಪುಲ್ಲೇಲ ಗೋಪಿಚಂದ್, ಮಾಜಿ ಭಾರತ ಹಾಕಿ ನಾಯಕ ಧನರಾಜ್ ಪಿಳ್ಳೆ, ಕಬಡ್ಡಿ ಸೂಪರ್‌ಸ್ಟಾರ್ ಪರ್ದೀಪ್ ನರ್ವಾಲ್ ಅವರಂತಹ ಆಟಗಾರರು ಪಾಲ್ಗೊಂಡಿದ್ದರು. ಇದೀಗ ವೈಭವ ಸೂರ್ಯವಂಶಿ ಕೂಡಾ ಅದರಲ್ಲಿ ಸ್ಥಾನ ಪಡೆದರು.
ಈ ವೇಳೆ ಮಾತನಾಡಿದ ಸೂರ್ಯವಂಶಿ, ತಮ್ಮ ಕ್ರೀಡಾ ಪಯಣದಲ್ಲಿ ಕಬಡ್ಡಿಗೆ ಸದಾ ಸ್ಥಾನವಿದೆ. ನಾನು ಸುಮಾರು ಐದು ಅಥವಾ ಆರು ವರ್ಷ ವಯಸ್ಸಿನಿಂದಲೂ ಕಬಡ್ಡಿ ಆಡುತ್ತಿದ್ದೇನೆ. ಆದ್ದರಿಂದ ಮ್ಯಾಟ್‌ಗೆ ಮರಳುವುದು ಮತ್ತು ಮೊದಲ ಬಾರಿಗೆ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವುದು ನಿಜವಾಗಿಯೂ ಉತ್ತಮವಾಗಿದೆ ಎಂದು ಅವರು ಹೇಳಿದರು.
ಕಬಡ್ಡಿ ಮತ್ತು ಟೇಬಲ್ ಟೆನ್ನಿಸ್ ಆಡಿ ಆನಂದಿಸಿರುವ ನನಗೆ ಕ್ರಿಕೆಟ್ ಯಾವಾಗಲೂ ಮೊದಲ ಪ್ರೀತಿಯಾಗಿದೆ. PKLನಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಬೆಂಬಲಿಸುತ್ತೇನೆ ಏಕೆಂದರೆ ಅದು ನನ್ನ ತವರು ತಂಡವಾಗಿದೆ ಮತ್ತು ಹೈ-ಫ್ಲೈಯರ್ ಪವನ್ ಸೆಹ್ರಾವತ್‌ಗಾಗಿ ಬೆಂಗಳೂರು ಬುಲ್ಸ್ ತಂಡವನ್ನು ಮೆಚ್ಚುತ್ತೇನೆ ಎಂದು ಹೇಳಿದರು.
Advertisement