

ಪಂಜಾಬ್‌ನ ಮೊಹಾಲಿಯ ಸೋಹಾನಾ ಪ್ರದೇಶದಲ್ಲಿ ನಿನ್ನೆ ಖಾಸಗಿ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಸೆಲ್ಫಿ ನೆಪದಲ್ಲಿ ಕಬಡ್ಡಿ ಆಟಗಾರ ರಾಣಾ ಬಾಲಚೌರಿಯಾ ತಲೆಗೆ ನಾಲ್ಕೈದು ಗುಂಡು ಹೊಡೆದಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ.
ಮೊಹಾಲಿ ಪೊಲೀಸ್ ವರಿಷ್ಠಾಧಿಕಾರಿ ಹರ್ಮನ್‌ದೀಪ್ ಹನ್ಸ್ ಅವರ ಪ್ರಕಾರ, ದಾಳಿಕೋರರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಆಟಗಾರ ರಾಣಾ ಬಾಲಚೌರಿಯಾ ಬಳಿಗೆ ಬಂದು ಇದ್ದಕ್ಕಿದ್ದಂತೆ ಅವರ ಮೇಲೆ ಗುಂಡು ಹಾರಿಸಿದರು. ಅವರನ್ನು ತಕ್ಷಣ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪೊಲೀಸರ ಪ್ರಕಾರ, ಘಟನೆಯ ನಂತರ ದಾಳಿಕೋರರು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಈ ಕೊಲೆಗೆ ದರೋಡೆಕೋರರ ಸಂಪರ್ಕದ ಸಾಧ್ಯತೆಯೂ ತನಿಖೆಯಲ್ಲಿದೆ. ಘಟನೆಯಲ್ಲಿ ಬಂಬಿಹಾ ಗ್ಯಾಂಗ್ ಭಾಗಿಯಾಗಿದ್ದರೂ, ಪೊಲೀಸರು ಇದನ್ನು ಔಪಚಾರಿಕವಾಗಿ ದೃಢಪಡಿಸಿಲ್ಲ.
ಗುಂಡಿನ ದಾಳಿಗೂ ಮೊದಲು ಕಬಡ್ಡಿ ಸ್ಥಳಕ್ಕೆ ಬರಬೇಕಾಗಿದ್ದ ಪ್ರಸಿದ್ಧ ಪಂಜಾಬಿ ಗಾಯಕನಿಗೂ ಈ ಘಟನೆಗೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಏತನ್ಮಧ್ಯೆ, ಸೋಹಾನಾದಲ್ಲಿ ರಾಣಾ ಬಾಲಚೌರಿಯಾ ಹತ್ಯೆಗೆ ನಾನೇ ಹೊಣೆ ಎಂದು ಹೇಳಿಕೊಳ್ಳುವ ಬಂಬಿಹಾ ಗ್ಯಾಂಗ್‌ಗೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯು ಸಿಧು ಮೂಸೆವಾಲಾ ಹತ್ಯೆಗೆ ಪ್ರತೀಕಾರಕ್ಕೆ ಸಂಬಂಧಿಸಿದೆ.
ಎಲ್ಲರಿಗೂ ಸತ್ ಶ್ರೀ ಅಕಲ್, ರಾಣಾ ಬಾಲಚೌರಿಯಾನನ್ನು ಇಂದು ಮೊಹಾಲಿ ಸೋಹಾನಾ ಸಾಹಿಬ್ ಕಬಡ್ಡಿ ಕಪ್ ಪಂದ್ಯಾವಳಿ ವೇಳೆ ಹತ್ಯೆ ಮಾಡಲಾಗಿದೆ. ನಾನು, ದೋನಿ ಬಾಲ್ ಶಗನ್‌ಪ್ರೀತ್, ಮೊಹಬ್ಬತ್ ರಾಂಧವಾ, ಅಮರ್ ಖೇವಾ ಪ್ರಭದಾಸ್ವಾಲ್ ಮತ್ತು ಕೌಶಲ್ ಚೌಧರಿ ಈ ಕೊಲೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ. ರಾಣಾ ಬಾಲಚೌರಿಯಾ, ಜಗ್ಗು ಖೋಟಿ ಮತ್ತು ಲಾರೆನ್ಸ್ ಬಿಷ್ಣೋಯ್ ಅವರೊಂದಿಗೆ ಸೇರಿ ನಮ್ಮ ವಿರುದ್ಧ ಕೆಲಸ ಮಾಡಿದ್ದಾನೆ. ಅವರು ಸಿಧು ಮೂಸೆವಾಲಾ ಅವರ ಕೊಲೆಗಾರನಿಗೆ ಆಶ್ರಯ ನೀಡಿದರು.
ಇಂದು ನಾವು ರಾಣಾನನ್ನು ಕೊಲ್ಲುವ ಮೂಲಕ ನಮ್ಮ ಸಹೋದರ ಮೂಸೆವಾಲಾನ ಹತ್ಯೆಗೆ ಸೇಡು ತೀರಿಸಿಕೊಂಡಿದ್ದೇವೆ. ಇದನ್ನು ನಮ್ಮ ಮಖಾನ್ ಅಮೃತಸರ ಮತ್ತು ಡೀಫಾಲ್ಟರ್ ಕರಣ್ ಮಾಡಿದ್ದಾರೆ. ಇಂದಿನಿಂದ, ಜಗ್ಗು ಖೋಟಿ ಮತ್ತು ಹ್ಯಾರಿ ಟಾಟ್ ತಂಡದಲ್ಲಿ ಯಾರೂ ಆಡಬಾರದು ಎಂದು ನಾನು ಎಲ್ಲಾ ಆಟಗಾರರು ಮತ್ತು ಅವರ ಪೋಷಕರನ್ನು ವಿನಂತಿಸುತ್ತೇನೆ ಮತ್ತು ಪರಿಣಾಮಗಳು ಒಂದೇ ಆಗಿರುತ್ತವೆ. ನಮಗೆ ಕಬಡ್ಡಿ ಅಲರ್ಜಿ ಇಲ್ಲ. ಖೋಟಿ ಮತ್ತು ಹ್ಯಾರಿ ಟಾಟ್ ಅವರ ಕಬಡ್ಡಿಯಲ್ಲಿ ನಾವು ಯಾವುದೇ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಬರೆದಿದ್ದಾರೆ.
Advertisement