ತಪ್ಪು ತೀರ್ಪು ಎಂದು ರೆಫರಿಗೆ ಕಾಲಿನಿಂದ ಒದ್ದ ಭಾರತೀಯ ಕುಸ್ತಿಪಟು ಶಿವರಾಜ್ ರಕ್ಷೆ, ವಿಡಿಯೋ ವೈರಲ್!

67ನೇ ಮಹಾರಾಷ್ಟ್ರ ಕೇಸರಿ ಕುಸ್ತಿ ಪಂದ್ಯಾವಳಿಯ ಸಮಯದಲ್ಲಿ, ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದರು. ಸೆಮಿಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ನಾಂದೇಡ್ ಕುಸ್ತಿಪಟು ಶಿವರಾಜ್ ರಕ್ಷೆ ತನಗೆ ವಿರುದ್ಧ ತೀರ್ಪು ನೀಡಿದ್ದಾರೆ.
Shivraj Rakshe
ಕುಸ್ತಿಪಟು ಶಿವರಾಜ್ ರಕ್ಷೆ
Updated on

ಮುಂಬೈ: ಕೆಲವೊಮ್ಮೆ ಕ್ರೀಡಾ ಮೈದಾನದಲ್ಲಿ ಇಂತಹ ಘಟನೆಗಳು ಸಂಭವಿಸುತ್ತವೆ. ಆದರೆ ಇಂತಹ ಘಟನೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಅಹಲ್ಯಾನಗರದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. 67ನೇ ಮಹಾರಾಷ್ಟ್ರ ಕೇಸರಿ ಕುಸ್ತಿ ಪಂದ್ಯಾವಳಿಯ ಸಮಯದಲ್ಲಿ, ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದರು. ಸೆಮಿಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ನಾಂದೇಡ್ ಕುಸ್ತಿಪಟು ಶಿವರಾಜ್ ರಕ್ಷೆ ತನಗೆ ವಿರುದ್ಧ ತೀರ್ಪು ನೀಡಿದ್ದಾರೆ ಎಂದು ರೆಫರಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕುಸ್ತಿಪಟು ಪಂದ್ಯದ ರೆಫರಿಯ ಮೇಲೆ ಹಲ್ಲೆ ನಡೆಸಿದಾಗ ಭಾರಿ ಗಲಾಟೆ ನಡೆದ್ದು ವಾತಾವರಣವು ತೀವ್ರ ಉದ್ವಿಗ್ನಗೊಂಡಿತ್ತು. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣವನ್ನು ಶಾಂತಗೊಳಿಸಿದರು. ರಕ್ಷೆ ಮತ್ತು ಪೃಥ್ವಿರಾಜ್ ಮೊಹೋಲ್ ನಡುವಿನ ಪಂದ್ಯದ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದರಲ್ಲಿ ಮೊಹೋಲ್ ಪರವಾಗಿ ತೀರ್ಪು ಬಂದಿತು. ಪೃಥ್ವಿರಾಜ್ ಮೊಹೋಲ್ ಪರವಾಗಿ ಫಲಿತಾಂಶ ಬಂದ ತಕ್ಷಣ, ಎರಡೂ ಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಾದ ನಂತರ, ಶಿವರಾಜ್ ರಕ್ಷೆ ರೆಫರಿಯ ಕಾಲರ್ ಹಿಡಿದು ಮಾಧ್ಯಮಗಳ ಮುಂದೆ ಒದ್ದಿದ್ದು ಈ ನಿರ್ಧಾರದಲ್ಲಿ ಅವರ ಅಪ್ರಾಮಾಣಿಕತೆಯ ಆರೋಪ ಮಾಡಿದರು.

ಅಂತಿಮ ಪಂದ್ಯದ ನಂತರ ಪೃಥ್ವಿರಾಜ್ ಮೊಹೋಲ್ ಅವರನ್ನು ವಿಜೇತರೆಂದು ಘೋಷಿಸಿದಾಗ ವಿವಾದ ಪ್ರಾರಂಭವಾಯಿತು. ನೀವು ನೀಡಿದ ನಿರ್ಧಾರ ತಪ್ಪಾಗಿದೆ ಎಂದು ರಕ್ಷಾ ರೆಫರಿಯ ಮುಂದೆ ಹೇಳಿಕೊಂಡಿದ್ದರು. ಅಲ್ಲದೆ ಮಾಧ್ಯಮಗಳ ಮುಂದೆ ತೀರ್ಪನ್ನು ಪರಿಶೀಲಿಸುವಂತೆ ತೀರ್ಪುಗಾರರನ್ನು ವಿನಂತಿಸಿದರು. ಈ ಘಟನೆಯ ನಂತರ, ಶಿವರಾಜ್ ರಕ್ಷೆ ನನ್ನನ್ನು ತಪ್ಪಾಗಿ ಹೊರಗಿಡಲಾಗಿದೆ ಎಂದು ಹೇಳಿದರು. ಆ ನಿರ್ಧಾರದಲ್ಲಿ ಸ್ಪಷ್ಟವಾಗಿ ಪಕ್ಷಪಾತವಿತ್ತು. ನಾನು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ದೂರು ನೀಡಿದ್ದೇನೆ. ನನಗೆ ವಿಮರ್ಶೆ ತೋರಿಸಬೇಕೆಂದು ನಾನು ಒತ್ತಾಯಿಸಿದ್ದೇನೆ. ಅಲ್ಲದೆ ಆ ನಿರ್ಧಾರ ಸರಿಯಾಗಿದ್ದರೆ ನಾನು ಆಟವನ್ನು ಬಿಡುತ್ತೇನೆ ಎಂದು ರಕ್ಷೆ ಸವಾಲು ಹಾಕಿದ್ದಾರೆ.

Shivraj Rakshe
2036ರ ಒಲಿಂಪಿಕ್ಸ್ ಆಯೋಜನೆಗೆ ಭಾರತ ಶತಪ್ರಯತ್ನ: 38ನೇ ರಾಷ್ಟ್ರೀಯ ಕ್ರೀಡಾಕೂಟ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿಕೆ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com